
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣ ಆರೋಪಿ ಆದಿತ್ಯ ರಾವ್ ಯಾವುದೇ ಜಾತಿ ಧರ್ಮಕ್ಕೆ ಸೇರಿದವನಾಗಿರಲಿ ಆತ ಒಬ್ಬ ದೇಶದ್ರೋಹಿ. ಈ ವಿಚಾರದಲ್ಲಿ ಯಾವುದೇ ಪಕ್ಷದವರೂ ಸಮರ್ಥಿಸಿಕೊಳ್ಳಬಾರದು ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಆರೋಪಿ ಸಿಗುವ ಮುನ್ನ ದೊಡ್ಡ ವಿಚಾರ ಮಾಡಿದ್ದರು. ಈಗ ಆರೋಪಿ ತಮ್ಮವನೇ ಎಂದು ಆತನ ಮಾನಸಿಕ ಸ್ಥಿತಿ ಸರಿಯಿಲ್ಲ ಎನ್ನುವ ಮೂಲಕ ತಿರುಚುತ್ತಿದ್ದಾರೆ.ಆರೊಪಿ ಯಾವುದೇ ಧರ್ಮದವನಾಗಿದ್ದರೂ ಸರಿ ಆತ ಮಾಡಿರುವುದು ದೇಶದ್ರೋಹದ ಕೆಲಸ ಎಂದು ಹೇಳುವ ಮೂಲಕ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಹೇಳಿಕೆಗೆ ತಿರುಗೇಟು ನೀಡಿದರು.
ಆರೋಪಿ ಮಾನಸಿಕವಾಗಿ ನೊಂದಿದ್ದ ಎಂದು ಅತನ ಮಾನಸಿಕ ಸ್ಥಿತಿ ಬಗ್ಗೆ ಹೇಳುವುದು ಸರಿಯಲ್ಲ. ಆರೋಪಿ ಯಾವುದೇ ಜಾತಿ ಧರ್ಮಕ್ಕೆ ಸೇರಿದವನಾಗಿರಲಿ ಆತ ಒಬ್ಬ ದೇಶದ್ರೋಹಿ. ಈ ವಿಚಾರದಲ್ಲಿ ಯಾವುದೇ ಪಕ್ಷದವರೂ ಸಮರ್ಥಿಸಿಕೊಳ್ಳಬಾರದು. ಆರೋಪಿ ಬಗ್ಗೆ ಪೊಲೀಸರ ತನಿಖೆ ವೇಳೆ ಆತ ಮಾನಸಿಕವಾಗಿ ನೊಂದಿದ್ದ ಎಂದು ಆತನ ಮಾನಸಿಕ ಸ್ಥಿತಿ ಬಗ್ಗೆ ಹೇಳಿಕೆ ನೀಡಬಾರದು. ಆತನ ಮಾನಸಿಕ ಸ್ಥಿತಿ ಬಗ್ಗೆ ಮಾತನಾಡುವವರು ವೈದ್ಯರು ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ