Kannada NewsLatest
ಇಂಡಿಯನ್ ಕೋಸ್ಟ್ ಗಾರ್ಡ್ ಕಚೇರಿಗೆ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಭೇಟಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಭಾರತೀಯ ಕರಾವಳಿ ಕಾವಲು ಪಡೆಯ ಪ್ರಧಾನ ಕಚೇರಿಗೆ ಸೌಜನ್ಯಯುತವಾಗಿ ರಾಜ್ಯ ಸರ್ಕಾರದ ಸಚಿವರಾದ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಬಸವಜ್ಯೋತಿ ಯೂಥ್ ಫೌಂಡೇಶನ ಅಧ್ಯಕ್ಷ್ಯರಾದ ಬಸವಪ್ರಸಾದ ಜೊಲ್ಲೆಯವರು ಇತ್ತೀಚೆಗೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಕರಾವಳಿ ಕಾವಲು ಪಡೆಗಳ ಮಹಾ ನಿರ್ದೇಶಕರಾದ ಕೃಷ್ಣಸ್ವಾಮಿ ನಟರಾಜನ್ ಹಾಗೂ ಉನ್ನತ ಅಧಿಕಾರಿಗಳಾದ ಸುಧಾಕರ್ ಪಾಟೀಲ್ ಹಾಜರಿದ್ದರು.
ಸುಧಾಕರ ಅವರು ನಿಪ್ಪಾಣಿ ಕ್ಷೇತ್ರದ ತವಂದಿ ಗ್ರಾಮದ ಸುಪುತ್ರರಾಗಿದ್ದು, ಭಾರತೀಯ ಕಾವಲು ಪಡೆಯಲ್ಲಿ ಉನ್ನತ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ಜೊಲ್ಲೆ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ