Kannada NewsLatest

ಅಖಿಲ ಭಾರತ ವೀರಶೈವ ಮಹಾಸಭೆಯಿಂದ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಸನ್ಮಾನ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ:   ಜಗತ್ತಿನಲ್ಲಿ ನಡೆದ ಹಲವಾರು ಕ್ರಾಂತಿಗಳು ಹೆಣ್ಣಿಗಾಗಿ ನಡೆದರೆ ಕಲ್ಯಾಣ ಕ್ರಾಂತಿಯು ಮಾನವತೆಯ ಮಾನ ಕಳೆವ ಜಾತಿ ಪದ್ಧತಿ ನಿರ್ಮೂಲನೆಗೆ, ಮಹಿಳೆಯರ ಉದ್ಧಾರಕ್ಕಾಗಿ ನಡೆದ ಜಗತ್ತಿನ ಮೊದಲ ಕ್ರಾಂತಿಯಾಗಿದೆ ಎಂದು ಸ್ಥಳೀಯ ಶಿವಬಸವನಗರದ ಲಿಂಗಾಯತ ಭವನದಲ್ಲಿ ಅಮಾವಾಸ್ಯೆ ಅನುಭಾವ ನೀಡಿದ ಮರಕುಂಬಿಯ ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿ ಶರಣೆ ವಿದ್ಯಾ ನೀಲಪ್ಪನವರ್ ಹೇಳಿದರು.

ಅಂಥದ್ದೊಂದು ಐತಿಹಾಸಿಕ ಕ್ರಾಂತಿ ಕರ್ನಾಟಕದಲ್ಲಿ ನಡೆದದ್ದು ನಮ್ಮ ಸುದೈವ. ಎಲ್ಲರಿಗೂ ಲಿಂಗದೀಕ್ಷೆ ನೀಡಿ ಅಸ್ಟೃಶ್ಯರ ಕೇರಿಗೆ ತೆರಳಿ ಅವರ ಮನೆಯಲ್ಲಿ ಅಂಬಲಿ ಸವಿದು ಅದು ಅಮೃತಕ್ಕೆ ಸಮಾನವೆಂದು ಉದ್ಧರಿಸಿ ಹರಿಜನ ಕೇರಿಯನ್ನು ಹರನಕೇರಿಯನ್ನಾಗಿ ಮಾಡಿದವರು ಬಸವಣ್ಣನ ನೇತೃತ್ವದಲ್ಲಿ ಸಂಘಟಿತರಾದ ಶರಣ ಸಂಕುಲದ ಕಾರ್ಯ ಉತ್ಕ್ರಾಂತಿಯಾಗಿದೆ.

ಕಲ್ಯಾಣದ ಅನುಭವ ಮಂಟಪವು ಶರಣರ ಜೇನಿನ ಗೂಡು ಆಗಿತ್ತು. ಶತಮಾನಗಳಿಂದ ತುಳಿತ ಕ್ಕೊಳಗಾದ ಶುದ್ರ ಸಮುದಾಯದ ಪ್ರತಿನಿಧಿ ಹರಳಯ್ಯ ಮತ್ತು ಶ್ರೇಷ್ಠಕುಲದವರೆಂದು ಗುರುತಿಸಲ್ಪಟ್ಟ ಮಧುವರಸರ ಮನೆತನಗಳನ್ನು ವೈವಾಹಿಕ ಸಂಬಂಧದಿಂದ ಜಾತಿ ಪದ್ಧತಿಯನ್ನು ನಿಮೂಲನೆ ಮಾಡಲು ಪ್ರಯತ್ನಿಸಿದರು. ಅಂಗದ ಮೇಲೆ ಲಿಂಗಧರಿಸಿದವರೆಲ್ಲ ಕೂಡಲ ಸಂಗಯ್ಯನ ಸ್ವರೂಪರು ಎಂದು ಸ್ಪಷ್ಟಪಡಿಸಿದರು.

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ತಿಗೆ ನೂತನವಾಗಿ ಆಯ್ಕೆಯಾಗಿರುವ ಚನ್ನರಾಜ ಹಟ್ಟಿಹೊಳಿ, ಬೆಳಗಾವಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್‌ಗೆ ಅಧ್ಯಕ್ಷರಾಗಿ ಎರಡನೇ ಸಲ ಆಯ್ಕೆಯಾದ  ಮಂಗಳಾ ಮೇಟಗುಡ್ ಅವರನ್ನು, ನಾಗನೂರು ರುದ್ರಾಕ್ಷಿಮಠದ ಪ್ರಸಾದ ಶ್ರೀ ಪ್ರಶಸ್ತಿ ಪಡೆದ ಡಾ.ಗುರುದೇವಿ ಹಲೇಪ್ಪನವರಮಠ ಅವರನ್ನು ಮಹಾಸಭೆ ಸನ್ಮಾನಿಸಿತು.

ವಿಧಾನಪರಿಷತ್ ಗೆ ಆಯ್ಕೆಯಾದ ಚನ್ನರಾಜ ಹಟ್ಟಿಹೊಳಿ ಅವರು ಅಖಿಲ ಭಾರತ ವೀರಶೈವ ಮಹಾಸಭೆ ಬೆಳಗಾವಿ ಜಿಲ್ಲಾಘಟಕದ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತ, ಲಿಂಗಾಯತ ವೀರಶೈವ ಸಮುದಾಯವು ಒಗ್ಗೂಡಿ ಗೌರವ ಪ್ರೀತಿಯಿಂದ ಆಯ್ಕೆ ಮಾಡಿದ್ದು, ಸನ್ಮಾನ ಮಾಡಿದ್ದು ನನಗೆ ಸಂತಸ ತಂದಿದೆ. ನಾನು ಈ ಸಮಾಜದ ಬಂಧುವಾದದ್ದಕ್ಕೆ ಹೆಮ್ಮೆಯಾಗುತ್ತೀದೆ. ಸಮಾಜದ ಸೇವೆಗೆ ನಾನು ಸದಾ ಸಿದ್ಧನಿದ್ದೇನೆ ಎಂದರು.

ಸನ್ಮಾನಕ್ಕೆ ಪ್ರತಿಕ್ರಿಯಿಸಿದ  ಮಂಗಾಲಾ ಮೆಟಗುಡ್ ಅವರು ನಾವೆಲ್ಲ ಸಾಕ್ಷರ ಶರಣರು. ಶರಣರ ಕ್ರಾಂತಿಯ ಕಾರಣದಿಂದ ನಾವೆಲ್ಲ ಹೊರಬಂದು ಎಲ್ಲ ರೀತಿಯ ಸ್ವಾತಂತ್ರ್ಯವನ್ನು ಅನುಭವಿಸುವಂತಾಗಿದೆ ಎಂದರು.

ವೇದಿಕೆಯ ಮೇಲೆ  ಚೋನ್ನದ ಅವರು ಇದ್ದರು. ಸಾನಿಧ್ಯವಹಿಸಿದ್ಧ ಕಾರಂಜಿಮಠದ ಗುರುಸಿದ್ಧ ಮಹಾಸಗವಾಮಿಗಳು ಆರ್ಶೀವಚನ ನೀಡಿದರು. ಅಧ್ಯಕ್ಷತೆವಹಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭೆ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷೆ  ರತ್ನಪ್ರಭಾ ಬೆಲ್ಲದ ಅವರು ಮಹಾಸಭೆಯು ಸಮಾಜದ ಎಲ್ಲ ವರ್ಗಗಳ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಸಮಾಜದ ಸಹಕಾರ ಸಲಹೆಗಳಿಂದ ಅನುಷ್ಠಾನದಲ್ಲಿ ತರುತ್ತಿದೆ. ಬಸವಾದಿ ಶರಣರ ಆಶಯಗಳನ್ನು ಪೂರೈಸುತ್ತಿದೆ ಎಂದರು. ಅನುಭಾವದ ವಿಚಾರಗಳನ್ನು ಚಿಂತನೆ ಮಾಡಲು ಲಿಂಗಾಯತ ಸಮಾಜದ ಒಳಪಂಗಡಗಳನ್ನು ಒಗ್ಗೂಡಿಸಬೇಕು ಎಂದರು.

ಆಶಾ ಯಮಕನಮರಡಿ ಅವರು ಕಾರ್ಯಕ್ರಮ ನಿರೂಪಿಸಿದರು. ಗೀತಾ ಬೆಂಚಿನಮರಡಿ ಸ್ವಾಗತಿಸಿದರು. ಬಸವನ ಕುಡಚಿಯ ಅಕ್ಕನಬಳಗದವರು ವಚನ ಪ್ರಾರ್ಥನೆ ಸಲ್ಲಿಸಿದರು. ಹೀರಾ ಚೌಗಲಾ ಅವರು ಅಕ್ಕನ ಹಸಿವಾದೊಡನೆ ಭಿಕ್ಷಾನ್ನಗಳುಂಟು ವಚನ ವಿಶ್ಲೇಷಣ ಮಾಡಿದರು. ಶರಣ ಸಂಚಾರ ನಿಯಂತ್ರಕ  ಅಂಗಡಿ ಅವರು ವಂದಿಸಿದರು.

ರಾಜ್ಯದಲ್ಲೇ ಮಾದರಿಯಾಗಿ ಬೆಳಗಾವಿ ಗ್ರಾಮೀಣ ಅಭಿವೃದ್ಧಿ – ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button