Belagavi NewsKarnataka News

*ಬೆಟ್ಟಿಂಗ್ ಕಟ್ಟಿ ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಜಿಗಿದು ಯುವಕನ ಹುಚ್ಚಾಟ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಈ ಮಧ್ಯೆ ಕುಡಿದ ಮತ್ತಿನಲ್ಲಿ ಯುವಕನೊಬ್ಬ ನದಿಗೆ ಹಾರಿ ಹುಚ್ಚಾಟ ಮೇರೆದಿದ್ದಾನೆ. ಸದ್ಯ ಈ ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದೆ.‌

ಗೋಕಾಕ್ ತಾಲೂಕಿನ ಕೊಣ್ಣೂರು ನಿವಾಸಿಯೊಬ್ಬ ಕುಡಿದ ಮತ್ತಿನಲ್ಲಿ ಸ್ನೇಹಿತರೊಂದಿಗೆ ನದಿಗೆ ಹಾರಿ ಈಜಿ ಬರುತ್ತೇನೆ ಎಂದು ಬೆಟ್ಟಿಂಗ್ ಕಟ್ಟಿದ್ದ ಎನ್ನಲಾಗಿದೆ. ಅದರಂತೆಯೇ ಇಂದು ಕಂಠಪೂರ್ತಿ ಕುಡಿದು ಘಟಪ್ರಭಾ ನದಿಯ ಸೇತುವೆ ಮೇಲಿಂದ ಹಾರಿ ಹುಚ್ಚಾಟ ಮೆರೆದಿದ್ದಾರೆ.

Home add -Advt

ಯುವಕ ಸೇತುವೆ ಮೇಲಿಂದ ನೀರಿಗೆ ಹಾರುವ ವಿಡಿಯೋ ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಸುಮಾರು ದೂರ ನೀರಿನಲ್ಲಿ ಈಜಿಕೊಂಡು ಹೋಗಿದ್ದು, ಕೊನೆಗೆ ದಡ ಸೇರಿದ್ದಾನೆ.‌ ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಯುವಕರ ಹುಚ್ಚಾಟಕ್ಕೆ ಬ್ರೇಕ್ ಹಾಕಬೇಕು ಎಂದು ಸ್ಥಳೀಯರು ಪೊಲೀಸರಿಗೆ ಮನವಿ ಮಾಡಿದ್ದಾರೆ.

Related Articles

Back to top button