Kannada NewsKarnataka NewsLatest

ಬೆಳಗಾವಿ ಪೊಲೀಸರ ಭರ್ಜರಿ ಭೇಟೆ: ಖತರ್ನಾಕ್ ವಂಚಕರು ಬಲೆಗೆ; ಬೆಚ್ಚಿ ಬೀಳುತ್ತೀರಿ ಈ ಸುದ್ದಿ ಓದಿದರೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಸೈಬರ್ ಕ್ರೈಮ್ ಬ್ರ್ಯಾಂಚ್ ಪೊಲೀಸರು ಭಾರಿ ಭೇಟೆಯಾಡಿದ್ದು ಖತರ್ನಾಕ್ ವಂಚಕರನ್ನು ಒದ್ದು ಕರೆತಂದಿದ್ದಾರೆ.
48 ಮೊಬೈಲ್ ಮತ್ತು 304 ಸಿಮ್ ಕಾರ್ಡ, 50 ಬೇರೆ ಬೇರೆ ಬ್ಯಾಂಕ್ ಖಾತೆಗಳ ಮೂಲಕ ಅಮಾಯಕರ ಹಣ ಲಪಟಾಯಿಸುತ್ತಿದ್ದ ಖದೀಮರು ಬಲೆಗೆ ಬಿದ್ದಿದ್ದಾರೆ.
ಜಾರ್ಖಂಡ್, ಮಹಾರಾಷ್ಟ್ರ ರಾಜ್ಯಗಳಲ್ಲಿ ಕುಳಿತು ಕರ್ನಾಟಕ, ಆಂಧ್ರಪ್ರದೇಶ ಮೊದಲಾದ ಭಾಗದ ಜನರಿಗೆ ಪಂಗನಾಮ ಹಾಕುತ್ತಿದ್ದವರನ್ನು ಪತ್ತೆ ಮಾಡಿ ಕರೆತಂದಿದ್ದಾರೆ.

ಘಟನೆಯ ವಿವರ

 

ದಿನಾಂಕ: 09-06-2021 ರಂದು ನಿವೃತ್ತ ಬಿಎಸ್ಎನ್ಎಲ್ ನೌಕರ  ಯಲ್ಲಪ್ಪ ನಾರಾಯಣ ಜಾಧವ (ಸಾ ಮಾರುತಿ ಗಲ್ಲಿ ಕಂಗ್ರಾಳಿ ಕೆಎಚ್, ಬೆಳಗಾವಿ) ಇವರಿಗೆ ಎಸ್ ಬಿ ಐ ಬ್ಯಾಂಕ್ ಖಾತೆ ಕೆ.ವಾಯ್.ಸಿ. ಆಪ್ ಡೇಟ್ ಮಾಡುವುದಿದೆ ಎಂದು ಹೇಳಿ ಅವರಿಂದ ಆಧಾರ ಕಾರ್ಡ ನಂಬರ ಹಾಗೂ ಆಧಾರ ಕಾರ್ಡ್ ಝರಾಕ್ಷ ಪ್ರತಿ ಮತ್ತು ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ನ್ನು ವಾಟ್ಸ್ಆಪ್ ಮುಖಾಂತರ ಪಡೆದುಕೊಳ್ಳಲಾಗಿತ್ತು. ಅವರ ಮೊಬೈಲ್ ನಿಂದ ಒಂದು ಟೆಕ್ಸ್ಟ್ ಮೆಸೇಜ್ ಕಳಿಸಿ   ಅದರಲ್ಲಿ ಒಂದು ಲಿಂಕ್ ಕಳುಹಿಸಿ ಅದನ್ನು ಕ್ಲಿಕ್ ಮಾಡಲು ತಿಳಿಸಿದಾಗ ಅವರು ಲಿಂಕ್ ಕ್ಲಿಕ್ ಮಾಡಿ ನಂತರ ಬಂದ ಓಟಿಪಿಯನ್ನು ಆರೋಪಿಗಳಿಗೆ ಹೇಳಿದ್ದರು.
ನಂತರ ಹಂತ ಹಂತವಾಗಿ 102 ಸಲ ಎಸ್. ಐ ಖಾತೆಯಿಂದ ಒಟ್ಟು 10.00.000/- ರೂ (ಹತ್ತು ಲಕ್ಷ ರೂಪಾಯಿ) ತೆಗೆದುಕೊಂಡು ಮೋಸ ಮಾಡಲಾಗಿತ್ತು. ಬಗ್ಗೆ ದಿನಾಂಕ 10-06-2021 ರಂದು ಬೆಳಗಾವಿ ನಗರ ಸಿ.ಇ.ಎನ್ ಅಪರಾಧ ಠಾಣೆಯಲ್ಲಿ ಐಟಿ ಕಾಯ್ದೆ ಅಡಿಯಲ್ಲಿ ಸೈಬರ್‌ ವಂಚನೆ ಪ್ರಕರಣ ದಾಖಲಾಗಿತ್ತು.
  ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಸಿಇಎನ್ ಠಾಣೆಯ ಪೊಲೀಸ್ ಇನಸ್ಪೆಕ್ಟರ್ ಬಿ. ಆರ್ ಗಡ್ಡೇಕರ  ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ದರು.
ಈ ತಂಡ ಸೈಬರ್‌ ವಂಚನೆ ಮಾಡಿದ ಪ್ರಮುಖ ಆರೋಪಿ ಜಾರ್ಖಂಡ ರಾಜ್ಯದ ಜಮತಾರ ಜಿಲ್ಲೆಯ   ಆರೋಪಿ ಮತ್ತು ಒಬ್ಬ ಮಹಿಳೆ ಹಾಗೂ ಬ್ಯಾಂಕ್ ಖಾತೆಗಳನ್ನು ತೆರೆಯಲು  ಪ್ರಮುಖ ಆರೋಪಿಗಳಿಗೆ ಸಹಾಯ ಮಾಡಿದ ಮಹಾರಾಷ್ಟ್ರ ರಾಜ್ಯದ ನಾಸಿಕ್ ದ ಒಬ್ಬನನ್ನು ಬಂಧಿಸಿದೆ.
5 ಮೊಬೈಲ್, 3 ಡೆಬಿಟ್ ಕಾರ್ಡ್, 50 ಬ್ಯಾಂಕ್ ಖಾತೆಗಳ ಮೂಲಕ ವಂಚನೆ ಮಾಡಿದ್ದ 12.56 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.
 ಈ ಕಾರ್ಯಾಚರಣೆಯಲ್ಲಿ ಬಿ. ಆರ್. ಗಡ್ಡಕರ ನೇತೃತ್ವದಲ್ಲಿ ಸಿಬ್ಬಂದಿಗಳಾದ  ವಿಜಯ ಬಡವಣ್ಣವರ್,  ಮಾರುತಿ ಕೊನ್ಯಾಗೋಳ, ಕೆ.ವಿ.ಚರಲಿಂಗಮಠ, ಮಹಿಳಾ ಪಿಸಿ ಭುವನೇಶ್ವರಿ ಹಾಗೂ ಸಿಬ್ಬಂದಿ ಅವರು ಭಾಗವಹಿಸಿದ್ದರು.
ಈ ಆರೋಪಿತರು ಸೈಬರ್‌ ವಂಚನೆ ಕೃತ್ಯ ಮಾಡಲು 48 ಮೊಬೈಲಗಳನ್ನು ಮತ್ತು 304 ಸಿಮ್ ಕಾರ್ಡಗಳನ್ನು 50 ಬೇರೆ ಬೇರೆ ಬ್ಯಾಂಕ್ ಖಾತೆಗಳನ್ನು ಉಯೋಗಿಸಿಕೊಂಡು ಅಪರಾಧ ಮಾಡಿದ್ದಾರೆ.   ಈ ಆರೋಪಿತರು ಬೆಳಗಾವಿ, ಕಲಬುರ್ಗಿ ಮತ್ತು ಬೆಂಗಳೂರು, ಕರ್ನಾಟಕ ರಾಜ್ಯದ ಬೇರೆ ಬೇರೆ ಭಾಗ ಹಾಗೂ ಆಂಧ್ರಪ್ರದೇಶಗಳಲ್ಲಿ ಹಾಗೂ ಬೇರೆ ಬೇರೆ ರಾಜ್ಯಗಳಲ್ಲಿಯೂ ಸಹ ವಂಚನೆ ಅಪರಾಧ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.
ಬೆಳಗಾವಿ ಪೊಲೀಸ್ ಕಮಿಶನರ್  ತ್ಯಾಗರಾಜ್, ಪೊಲೀಸ್ ಉಪಆಯುಕ್ತ ವಿಕ್ರಂ ಅಮಟೆ ಈ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದ್ದಲ್ಲದೆ, ಯಶಸ್ವಿ ಕಾರ್ಯಾಚರಣೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಈ ಹಿಂದೆ ಪ್ರಕಟವಾಗಿದ್ದ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ –

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button