Latest

ಬಿದ್ದ ಚೀಲ ಬಿಚ್ಚುತ್ತಿದ್ದಂತೆ ಶಾಕ್ ಆದ ಯುವಕರು…!

ಪ್ರಗತಿವಾಹಿನಿ ಸುದ್ದಿ; ಬೇಲೂರು : ತಾಲೂಕಿನ ಜೌಡನಹಳ್ಳಿ ಸಮೀಪ 38 ಮಂಗಗಳನ್ನು ಸಾಯಿಸಿ ಚೀಲದಲ್ಲಿ ತುಂಬಿ ತಂದು ಹಾಕುವ ಮೂಲಕ ದುಷ್ಕರ್ಮಿಗಳು ಅಮಾನವೀಯತೆ ಮೆರೆದಿದ್ದಾರೆ.

ಗ್ರಾಮಕ್ಕೆ ತೆರುಳ್ಳುತ್ತಿದ್ದ ಕೆಲ ಯುವಕರು ರಸ್ತೆ ಬದಿಯಲ್ಲಿ ಬಿದ್ದಿದ್ದ ಚೀಲವನ್ನು ಕುತೂಹಲದಿಂದ ಬಿಚ್ಚಿ ನೋಡಿದಾಗ ಮಂಗಗಳ ಮೃತದೇಹಗಳು ಪತ್ತೆಯಾಗಿ, ಮತ್ತೆ ಕೆಲವು ಉಸಿರಾಡುತ್ತಿರುವುದು ಕಂಡು ಬಂದಿದೆ

Home add -Advt

ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿ ಜೀವಂತವಿದ್ದ ಕೆಲ ಮಂಗಗಳಿಗೆ ಯುವಕರು ನೀರು ಕುಡಿಸಿದ್ದಾರೆ. ಆದರೆ ಅವೂ ಕೂಡ ಸತ್ತಿವೆ. ಈ ವೇಳೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳು  ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾಲೂಕಿನ ತರಗೆ ಅರಣ್ಯ ಪ್ರದೇಶದಲ್ಲಿ ಮೃತ ಮಂಗಗಳ ಮರಣೋತ್ತರ ಪರೀಕ್ಷೆ ನಡಸಿ ಗುಂಡಿ ತೆಗೆದು ಹೊಳಲಾಯಿತು.

ನೂತನ ಸಚಿವರ ಪಟ್ಟಿ ; ಹೈಕಮಾಂಡ್ ಸೂಚನೆಗೆ ಕಾಯುತ್ತಿದ್ದೇನೆ ಎಂದ ಸಿಎಂ

Related Articles

Back to top button