Latest

ಪ್ರಗತಿ ಮೀಡಿಯಾ ಹೌಸ್ ಗೆ ವಿಭೂತಿಪುರ ಮಠ ಶ್ರೀಗಳ ಶುಭಾಷಯ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಪ್ರಗತಿ ಮೀಡಿಯಾ ಹೌಸ್ ಮತ್ತು ಪ್ರಗತಿ ವಾಹಿನಿಗೆ ಬೆಂಗಳೂರಿನ ವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಶುಭ ಹಾರೈಸಿದ್ದಾರೆ.

Home add -Advt

ಈ ಕುರಿತು ಸಂದೇಶ ಕಳಿಸಿರುವ ಅವರು, ಪ್ರಗತಿ ಮೀಡಿಯ ಹೌಸ್ ಪ್ರಾರಂಭವಾಗುತ್ತಿರುವುದು ತುಂಬಾ ಸಂತೋಷದ ಸಂಗತಿ. ಹುಕ್ಕೇರಿಯ ಪೂಜ್ಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ ಕ್ರೀಯಾಶೀಲ ಹಸ್ತದಿಂದ ಉದ್ಘಾಟನೆಗೊಂಡ  ಮೀಡಿಯಾ ಹೌಸ್ ಇತೋಪ್ಯತಿಶಯವಾಗಿ ಬೆಳೆಯಲಿ. 

ನಾವು ಕೂಡಾ ಪ್ರಗತಿ ವಾಹಿನಿಯ ವೀಕ್ಷಕರಲ್ಲೊಬ್ಬರು ಎಂದು ಹೇಳಲು ಹೆಮ್ಮೆ ಎನಿಸುತ್ತದೆ.  ಅತ್ಯಂತ ಕಡಿಮೆ ಸಮಯದಲ್ಲಿ ಸುಮಾರು 80 ಸಾವಿರ ವೀಕ್ಷಕರನ್ನು ಹೊಂದಿದ ಪ್ರಗತಿ ವಾಹಿನಿ ಕೋಟಿ ಕೋಟಿ ಓದುಗರನ್ನು ಹೊಂದಲಿ ಎಂದು ಹಾರೈಸುತ್ತೇವೆ ಎಂದಿದ್ದಾರೆ. 

 

Related Articles

Back to top button