Belagavi NewsBelgaum News
*ಕಳಸಾ- ಬಂಡೂರಾ ನೀರು ಧಾರವಾಡಕ್ಕೆ ಹರಿಸಲು ರೈತರ ವಿರೋಧ:* *ಕೃಷಿ ಭೂಮಿ ಉಳಿಸಲು ರೈತರ ಸಭೆ*

ಪ್ರಗತಿವಾಹಿನಿ ಸುದ್ದಿ: ಖಾನಾಪುರದ ರೈತರಿಗೆ ಕರ್ನಾಟಕ ಸರ್ಕಾರವು ಅವರ ಭೂಮಿಯನ್ನು ಸ್ವಾಧೀನ ಪಡೆಸಿಕೊಳ್ಳಲು ನೋಟೀಸ್ ಜಾರಿ ಮಾಡಿದೆ. ಬಂಡೂರಾ ನಾಲೆಯ ನೀರನ್ನು ದೊಡ್ಡ ಪೈಪ್ ಮೂಲಕ ಧಾರವಾಡ ಜಿಲ್ಲೆಯ ಊರುಗಳಿಗೆ ಪೂರೈಸಲು ರೈತರ ಫಲವತ್ತಾದ ಭೂಮಿಯನ್ನು ಕಬಳಿಸುವ ಯೋಜನೆ. ಈ ಯೋಜನೆಯಿಂದ ಖಾನಾಪುರದ ರೈತರು ಭೂಮಿಯನ್ನು, ಸಾರ್ವಜನಿಕರು ನೀರನ್ನು ಕಳೆದುಕೊಳ್ಳುವರು.
ಅದಲ್ಲದೆ ಈ ನದಿಯ ನೀರಿನ ಮೇಲೆ ಅವಲಂಭಿತವಾಗಿರುವ ಈ ಭಾಗದ ಅರಣ್ಯ ನಾಶವಾಗಿ ಖಾನಾಪುರ ಮಳೆ ಕೊರತೆ ಎದುರಿಸಲಿದೆ. ಅಲ್ಲದೇ ಉತ್ತರ ಕರ್ನಾಟಕದ ಮರುಭೂಮೀಕರಣದ ವೇಗವು ಹೆಚ್ಚಲಿದೆ.
ಖಾನಾಪುರದ ಮಳೆ, ನೀರು, ಕೃಷಿ,ಭೂಮಿ ಮತ್ತು ರೈತರನ್ನು ರಕ್ಷಿಸುವ ನಿಟ್ಟಿನಲ್ಲಿ ಬುಧವಾರ 09/04/2025 ರಂದು ಬೆಳಿಗ್ಗೆ 10.30 ಕ್ಕೆ ವಾಗಲೆ ಕಾಲೇಜ್ ಹಾಲ್ನಲ್ಲಿ( ಖಾನಾಪುರ ಬಸ್ ಸ್ಟಾಂಡ್ ಎದುರಿಗೆ ) ಸಭೆ ಕರೆಯಲಾಗಿದ್ದು, ನಾಗರಿಕರು ಜಾತಿ, ಧರ್ಮ, ಭಾಷೆ, ಪಕ್ಷ ಭೇದ ಮರೆತು ಭಾಗವಹಿಸಲು ರೈತ ಮುಖಂಡರು ಕೋರಿದ್ದಾರೆ.