Education

*ಭರತೇಶ ಶಿಕ್ಷಣ ಸಂಸ್ಥೆಯ ಬಿಬಿಎ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ* 

ಪ್ರಗತಿವಾಹಿನಿ ಸುದ್ದಿ ಬೆಳಗಾವಿ: ಭರತೇಶ ಶಿಕ್ಷಣ ಸಂಸ್ಥೆಯ ಪದ್ಮರಾಜ ಅರಿಗಾ ಬಿಬಿಎ ಮಹಾವಿದ್ಯಾಲಯದ 2014 ನೇ ಸಾಲಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ ಇತ್ತೀಚೆಗೆ ನಡೆಯಿತು. 

ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಶರದ ಬಾಳಿಕಾಯಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ  ಜೀವನದಲ್ಲಿ  ಕಷ್ಟಪಟ್ಟು  ಉದ್ಯೋಗಗಳನ್ನು ಆರಂಭಿಸಬೇಕು.  ಉದ್ಯೋಗ ಮತ್ತು ಉದ್ಯಮದಲ್ಲಿ ಎಷ್ಟೆ ಕಷ್ಟಗಳು ಬಂದರೂ ಅವುಗಳನ್ನು ಸಮರ್ಥ ಮತ್ತು ಧೈರ್ಯದಿಂದ ಎದುರಿಸಿ ಜೀವನದಲ್ಲಿ ಯಶಸ್ವಿಯಾಗಬೇಕೆಂದು ಸಲಹೆ ನೀಡಿದರು. 

Home add -Advt

ಪ್ರಾಚಾರ್ಯ ಡಾ. ಪ್ರಶಾಂತ ಕಾಂಬಳೆ ಅವರು ಮಾತನಾಡಿ ಇಂದು ನೀವು ಮಹಾವಿದ್ಯಾಲಯ ತೊರೆದು ಹೊಸ ಜಗತ್ತಿನಲ್ಲಿ ಮುನ್ನಡೆಯಲಿದ್ದಿರಿ, ಹಾಗಾಗಿ ಸದಾ ಜಾಗೃತಿ ಹಾಗೂ ಎಚ್ಚರಿಕೆಯಿಂದ ಹೆಜ್ಜೆಯನ್ನಿಟ್ಟು ಜೀವನದಲ್ಲಿ ಉತ್ತಮ ಪ್ರಜೆಯಾಗಬೇಕೆಂದು ಅವರು ತಿಳಿಸಿದರು. 

ಸಮಾರಂಭದಲ್ಲಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಾದ ಮಾಧುರಿ ಗುಂಡುಗೋಳ ಮೊಹ್ಮದ ಬಿಜಗರ್ಣಿ, ಸಬಾ ಕುಡಚಿವಾಲೆ, ಸ್ನೇಹಾ ಪದ್ಮಣ್ಣವರ,  ವಾಣಭಾಭೋ ಕೆ.ಪೂನಂ ದೇಸಾಯಿ, ಹರ್ಷನ ರಾಜಮಾನೆ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. 

Related Articles

Back to top button