ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ –
ಬೆಳಗಾವಿಯಿಂದ ದೆಹಲಿಗೆ ತೆರಳುತ್ತಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗಿ ವಿಮಾನದ ಇಂಜಿನ್ ಗೆ ಹಾನಿಯಾದ ಘಟನೆ ನಡೆದಿದೆ.
ಬೆಳಗಾವಿಯಿಂದ ದೆಹಲಿಗೆ ಹೊರಟಿದ್ದ ಸ್ಪೈಸ್ ಜೆಟ್ ಬಿ 737 ವಿಮಾನ ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವಾಗ ಈ ಘಟನೆ ನಡೆದಿದೆ. ವಿಮಾನದಲ್ಲಿ 187 ಪ್ರಯಾಣಿಕರಿದ್ದರು. ವಿಮಾನ ಲ್ಯಾಂಡಿಂಗ್ ಆಗುವ ವೇಳೆ ಹಕ್ಕಿ ಡಿಕ್ಕಿಯಾಗಿ ಇಂಜಿನ್ ಗೆ ಹಾನಿ ಸಂಭವಿಸಿದೆ.
ಇದೇ ವಿಮಾನ ಮುಂದೆ ದೆಹಲಿಯಿಂದ ಬೆಳಗ್ಗೆ 11.55 ಕ್ಕೆ ಒರಿಸ್ಸಾಕ್ಕೆ ತೆರಳಬೇಕಿತ್ತು. ಆದರೆ ಇಂಜಿನ್ ಗೆ ಹಾನಿಯಾದ ಕಾರಣ ವಿಮಾನ ಮಧ್ಯಾಹ್ನ 2 ಗಂಟೆಗೆ ಒರಿಸ್ಸಾಗೆ ಪ್ರಯಾಣ ಕೈಗೊಂಡಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೇದಾರನಾಥನ ಸನ್ನಿಧಿಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪ್ರಾರ್ಥಿಸಿದ್ದೇನು ಗೊತ್ತೇ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ