ಕ್ಷೇತ್ರದ ಮತ್ತಷ್ಟು ಅಭಿವೃದ್ಧಿಗೆ ಮತ್ತೊಮ್ಮೆ ಅವಕಾಶ ನೀಡಿ: ಸಚಿವೆ ಶಶಿಕಲಾ ಜೊಲ್ಲೆ
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಕ್ಷೇತ್ರದ ಸಮುದಾಯದೊಂದಿಗೆ ಸದಾ ಇರುತ್ತೇನೆ. ಕಳೆದ ಚುನಾವಣೆಯಲ್ಲಿ ಬೆಂಬಲಿಸಿ ಹೆಚ್ಚಿನ ಮತದೊಂದಿಗೆ ಗೆಲ್ಲಿಸಿದ್ದೀರಿ. ಅದೇ ರೀತಿ ಈ ಬಾರಿಯೂ ಹೆಚ್ಚಿನ ಮತದೊಂದಿಗೆ ಬೆಂಬಲ ನೀಡಿ ಎಂದು ಸ್ಥಳೀಯ ಬಿಜೆಪಿ ಅಭ್ಯರ್ಥಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಮಂಗಳವಾರ ಬಿರುಬಿಸಿಲಿನ ನಡುವೆ ಸ್ಥಳೀಯ ವಿಧಾನಸಭಾ ಕ್ಷೇತ್ರದ ತವಂದಿ, ಯರನಾಳ, ಶಿರಗುಪ್ಪಿ ಕುರ್ಲಿ ಹಾಗೂ ಭಾಟನಾಗನೂರ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು. ’ಕಳೆದ ೧೦ ವರ್ಷದಲ್ಲಿ ತವಂದಿ ಗ್ರಾಮದಲ್ಲಿ ೬ ಕೋಟಿ ರೂ.ಗೂ ಅಧಿಕ ಕಾಮಗಾರಿ, ಯರನಾಳ ಗ್ರಾಮದಲ್ಲಿ ೧೩.೫೦ ಕೋಟಿ ರೂ.ಗೂ ಅಧಿಕ, ಶಿರಗುಪ್ಪಿ ಗ್ರಾಮದಲ್ಲಿ ೧೮ ಕೋಟಿ ರೂ.ಗೂ ಅಧಿಕ, ಕುರ್ಲಿ ಗ್ರಾಮದಲ್ಲಿ ೨೬ ಕೋಟಿ ರೂ.ಗೂ ಅಧಿಕ, ಭಾಟನಾಗನೂರ ಗ್ರಾಮದಲ್ಲಿ ೮ ಕೋಟಿ ರೂ. ಅಧಿಕ ಅಭಿವೃದ್ಧಿಯ ಕಾಮಗಾರಿಗಳನ್ನು ಕೈಗೊಂಡಿದ್ದೇನೆ. ಗ್ರಾಮಗಳಲ್ಲಿ ರಸ್ತೆ, ಚರಂಡಿ, ಮನೆ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ, ಅಂಗನವಾಡಿ, ದೇವಸ್ಥಾನ ಜೀರ್ಣೋದ್ದಾರ ಹೀಗೆ ಹಲವಾರು ಕಾಮಗಾರಿ ಕೈಗೊಂಡಿದ್ದೇನೆ. ಕ್ಷೇತ್ರದಲ್ಲಿ ಆಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವ ಸದವಕಾಶ ನೀಡಿದ್ದೀರಿ. ಕ್ಷೇತ್ರದ ಇನ್ನಷ್ಟು ಅಭಿವೃದ್ಧಿಗೆ ಮತ್ತೊಮ್ಮೆ ಅವಕಾಶ ನೀಡಿ’ ಎಂದು ಮನವಿ ಮಾಡಿದರು.
ಕ್ಷೇತ್ರದ ಬಿಜೆಪಿ ಪ್ರಮುಖರು ಮತ್ತು ನೂರಾರು ಮಹಿಳೆಯರು ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಅವರಿಗೆ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಮಧುಕರ ಪಾಟೀಲ, ಮುಕುಂದ ಪಾಟೀಲ, ಅರವಿಂದ ಪಾಟೀಲ, ಬಾಬಾಸಾಬ ಕದಮ, ಶಿವಾಜಿ ಪಾಟೀಲ, ಸಂಗೀತಾ ಬೆಳವಾಡೆ, ನಿಲೇಶ ಪಾಟೀಲ, ಬಾಳಾಸಾಬ ಪಾಟೀಲ-ನಿಂಬಾಳಕರ, ಸಿದ್ದೋಜಿರಾಜೆ ಪಾಟೀಲ-ನಿಂಬಾಳ್ಕರ್, ಗ್ರಾಮ ಪಂಚಾಯತ್ ಸದಸ್ಯೆ ಅರ್ಚನಾ ಕಾಂಬಳೆ, ಸೋನಲ ಪಾಟೀಲ, ಅಶೋಕ ಐಹೊಳೆ, ದಿಗ್ವಿಜಯ ಪಾಟೀಲ, ಜ್ಯೋತಿರಾಮ ಪವಾರ, ಸುರೇಶ ಪವಾರ, ಸಂಗೀತಾ ಪವಾರ, ದೇವಿಕಾ ಪಾಟೀಲ, ಪಂಕಜ ದೇಸಾಯಿ, ಬೂತ್ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ