Latest

*ಪೊಲೀಸ್ ಠಾಣೆಯಲ್ಲಿಯೇ ಮಹಿಳೆಗೆ ಮನಬಂದಂತೆ ಥಳಿಸಿದ ಬಿಜೆಪಿ ಮುಖಂಡ*

ಪ್ರಗತಿವಾಹಿನಿ ಸುದ್ದಿ: ಪೊಲೀಸ್ ಠಾಣೆಯಲ್ಲಿಯೇ ಬಿಜೆಪಿ ಮುಖಂಡನೊಬ್ಬ ಮಹಿಳೆಯನ್ನು ಮನಬಂದಂತೆ ಥಳಿಸಿರುವ ಘಟನೆ ಮಹಾರಾಷ್ಟ್ರದ ಬಲ್ದಾಣಾ ಮಲ್ಕಾಪುರದಲ್ಲಿ ನಡೆದಿದೆ.

ಶಿವಚಂದ್ರ ತಾಯ್ಡೆ ಎಂಬ ಬಿಜೆಪಿ ಮುಖಂಡ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ. ಪೊಲೀಸರು ತಡೆಯಲು ಯತ್ನಿಸಿದರು ಮಹಿಳೆಯನ್ನು ಮನಬಂದಂತೆ ಹೊಡೆದಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Home add -Advt

ಬಲ್ದಾಣಾ ಮಲ್ಕಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಮಹಿಳೆಯ ಸಂಬಂಧಿಯಾಗಿರುವ ಶಿವಚಂದ್ರ ತಾಯ್ಡೆ ವಿರುದ್ಧ ಮಹಿಳೆ ಹಾಗೂ ಆಕೆಯ ಮಗ-ಸೊಸೆ ಪೊಲೀಸ್ ಠಾಣೆಗೆ ದೂರು ನೀಡಿಲು ಹೋಗಿದ್ದರು. ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡುವಾಗ ಮಹಿಳೆ ಬಿಜೆಪಿ ನಾಯಕನ ಮಾತುಗಳನ್ನು ರೆಕಾರ್ಡ್ ಮಾಡಲು ಶುರು ಮಾಡಿದ್ದಾಳೆ. ಕೋಪಗೊಂದ ಶಿವಚಂದ್ರ ತಾಯ್ಡೆ, ಫೋನ್ ಕಿತ್ತುಕೊಂಡು ಮಹಿಳೆಗೆ ಕಪಾಳ ಮೋಕ್ಷ ಮಾಡಿದ್ದಾನೆ. ಬಳಿಕ ಮನಬಂದಂತೆ ಥಳಿಸಿದ್ದಾನೆ. ಪೊಲಿಸರು ತಡೆಯಲು ಯತ್ನಿಸುತ್ತಿದ್ದಂತೆ ಅಲ್ಲಿದ್ದ ಚೇರ್ ಗಳನ್ನು ತಳ್ಳಿ ರಂಪಾಟ ನಡೆಸಿದ್ದಾನೆ. ಮಹಿಳೆ ಮೇಲೆ ಬಿಜೆಪಿ ಮುಖಂಡ ಹಲ್ಲೆನಡೆಸಲು ಕಾರಣ ನಿಖರವಾಗಿ ತಿಳಿದುಬಂದಿಲ್ಲ.


Related Articles

Back to top button