Karnataka NewsLatest

*ಬಿಜೆಪಿ ಮುಖಂಡ ನೆಟ್ಟಾರು ಹತ್ಯೆ ಪ್ರಕರಣ; ಮತ್ತೋರ್ವ ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ನಾಲ್ಕನೇ ಆರೋಪಿಯನ್ನು ಬಂಧಿಸಿದೆ.

ಹಾಸನ ಜಿಲ್ಲೆಯ ಸಕಲೇಶಪುರದ ಆನೆಮಹಲ್ ಬಳಿ ಆರೋಪಿ ಮುಸ್ತಾಫ್ ಪೈಚಾರ್ (43) ನನ್ನು ಬಂಧಿಸಿದ್ದಾರೆ. ಈತ ಸುಳ್ಯದ ಶಾಂತಿನಗರದ ನಿವಾಸಿ. ಆರೋಪಿಯನ್ನು ಬಂಧಿಸಿರುವ ಎನ್ ಐಎ ತಂಡ ಬೆಂಗಳೂರಿಗೆ ಕರೆ ತರುತ್ತಿದೆ.

ಬಿಜೆಪಿ ಯುವ ಮುಖಂಡನಾಗಿದ್ದ ಪ್ರವೀನ್ ನೆಟ್ಟಾರು ಎಂಬುವವರನ್ನು 2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲುಕಿನ ಬೆಳ್ಳಾರೆಯಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಎನ್ ಐಎಗೆ ಹಸ್ತಾಂತರಿಸಲಾಗಿತ್ತು. ಈಗಾಗಲೇ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿದ್ದ ಎನ್ ಐಎ ಇದೀಗ ನಾಲ್ಕನೇ ಆರೋಪಿಯನ್ನು ಬಂಧಿಸಿದೆ.

Home add -Advt


Related Articles

Back to top button