Belagavi NewsBelgaum NewsKannada NewsKarnataka NewsLatest

*ಸರ್ಕಾರದ ವಿರುದ್ಧ ಬೃಹತ್ ಜನಾಂದೋಲನ ಪ್ರತಿಭಟನಾ ಸಭೆ; ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಡಿ.13 ಕ್ಕೆ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ದ ಸುಮಾರ 25ಸಾವಿರಕ್ಕೂ ಹೆಚ್ಚಿನ ಜನಸೇರಿ ಬೃಹತ್ ಜನಾಂದೋಲನ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗುವದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವೀಜಯೇಂದ್ರ ಹೇಳಿದರು.

ನಗರದ ಖಾಸಗಿ ಹೊಟೆಲೊಂದರಲ್ಲಿ ಕರೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾತನಾಡಿ, ರಾಜ್ಯ ರಾಜಕೀಯ ಬದಲಾವಣೆಗೆ ಬೆಳಗಾವಿ ಹೆಸರಾಗಿದ್ದು ಬದಲಾವಣೆಯ ಗಾಳಿ ಬೆಳಗಾವಿಯಿಂದ ಮಾಡಲು ನಿರ್ಣಯ ಕೈಗೊಳ್ಳಲಾಯಿತು. ರಾಷ್ಟ್ರ ರಾಜಕೀಯಕ್ಕೆ ಕರ್ನಾಟಕ ಅತ್ಯಂತ ಪ್ರಮುಖ‌ ಸ್ಥಾನ ವಹಿಸಿದರೆ ಕರ್ನಾಟಕ್ಕೆ ಬೆಳಗಾವಿ ಜಿಲ್ಲೆ ಮಹತ್ವ ಹೊಂದಿದೆ ಆದ್ದರಿಂದ ಬೆಳಗಾವಿ ಜಿಲ್ಲೆಯಿಂದ ಭ್ರಷ್ಟಾಚಾರದಲ್ಲಿ ಮುಳಗಿರುವ ರಾಜ್ಯ ಕಾಂಗ್ರೆಸ್ ಕಿತ್ತೊಗೆಯಲು ಗಂಡು ಮೆಟ್ಟಿನ ಸ್ಥಳ ಬೆಳಗಾವಿಯಿಂದ ಪ್ರತಿಭಟನಾ ಹಮ್ಮಿಕೊಳ್ಳುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ನೆತೃತ್ವದ ಸರ್ಕಾರ ರಚಿಸುವ ವರೆಗೆ ವಿಶ್ರಮಿಸದೆ ಕಾರ್ಯಕರ್ತರಾದ ನಾವೆಲ್ಲರೂ ಶ್ರಮಿಸೊಣ. ಭಿಕರ ಬರಗಾಲದಲ್ಲಿ ಎಕರೆಗೆ ಪುಡಿಗಾಸು ನೀಡಲು ಇನ್ನು ಯೋಚಿಸುತ್ತಿರುವ ಹಾಗೂ ಹಿಂದೂ ವಿರೊಧಿ ನೀತಿ ಜಾತಿಗಳ ನಡುವೆ ಬೆಂಕಿ ಹಚ್ಚುತ್ತಿರುವ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ತೊಲಗುವಂತೆ ಕರೆ ನೀಡಿದರು.

ಬುಧವಾರ ಡಿ13 ರಂದು ಮಧ್ಯಾಹ್ನ 3ಗಂಟೆಗೆ ಯಡಿಯುರಪ್ಪ ಮಾರ್ಗದ ಮಾಲಿನಿ ಸಿಟಿಯಲ್ಲಿ‌ ಬಿಜೆಪಿ ಪ್ರತಿಭಟನಾ ಸಭೆ ನಡೆಯಲಿದೆ. ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಸೆರಲಿದ್ದಾರೆ ಎಂದು ತಿಳಿದುಬಂದಿದೆ.

ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಶಾಸಕ ಅಭಯ ಪಾಟೀಲ, ದುರ್ಯೋದನ ಐಹೋಳೆ, ವಿಠಲ ಹಲಗೇಕರ, ನಿಖಿಲ ಕತ್ತಿ ಜಿಲ್ಲಾ ಅಧ್ಯಕ್ಷರಾದ ಸಂಜಯ ಪಾಟೀಲ, ಅನಿಲ ಬೆನಕೆ, ಡಾ.ರಾಜೇಶ ನೆರ್ಲಿ, ಮಾಜಿ ಸಂಸದ ರಮೆಶ ಕತ್ತಿ, ಮೇಯರ ಶೋಭಾ ಸೊಮನಾಚೆ, ಉಪಮೇಯರ್ ರೇಶ್ಮಾ ಪಾಟಿಲ, ಮಾಜಿ ಶಾಸಕರಾದ ಪಿ.ರಾಜೀವ, ಜಗದೀಶ ಕವಟಗಿಮಠ, ಜಗದೀಶ ಮೆಟಗುಡ್, ಅರವಿಂದ ಪಾಟೀಲ, ರಾಜ್ಯ ವಕ್ತಾರ ಎಮ್.ಬಿ.ಝೀರಲಿ, ರಾಜ್ಯ ಕಾರ್ಯದರ್ಶಿ ಉಜ್ವಲಾ ಭಡವನಾಚೆ, ರಮೆಶ ದೇಶಪಾಂಡೆ, ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ, ಬಸವರಾಜ ಯಕ್ಕಂಚಿ,ಸಂದೀಪ ದೇಶಪಾಂಡೆ, ಬಿರಾದಾರ, ಮುರಘೇಂದ್ರಗೌಡ ಪಾಟೀಲ, ಡಾ.ರವಿ ಪಾಟೀಲ, ಎಫ್.ಎಸ್.ಸಿದ್ದನಗೌಡರ, ಈರಣ್ಣ ಅಂಗಡಿ, ವಿರುಪಾಕ್ಷ ಮಾಮಾನಿ, ಬಸವರಾಜ ಹುಂದ್ರಿ ಪಿ.ಎಫ್.ಪಾಟಿಲ , ನಗರ ಸೇವಕರು ಹಾಗೂ 18ಕ್ಷೆತ್ರದ ಪದಾಧಿಕಾರಿಗಳು ಇದ್ದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button