Latest

ಕೇಂದ್ರ ಸಚಿವ ಅನುರಾಗ್ ಠಾಕೂರ್ ತವರು ಜಿಲ್ಲೆಯಲ್ಲೇ ಎಲ್ಲ 5 ಕಡೆ ಮುದುಡಿದ ಕಮಲ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಜಿಲ್ಲೆಯ ಎಲ್ಲ 5 ವಿಧಾನಸಭಾ ಸ್ಥಾನಗಳನ್ನು ಬಿಜೆಪಿ ಕಳೆದುಕೊಂಡಿದೆ.

ಅವರ ಸ್ಥಳೀಯ ಜಿಲ್ಲೆ ಹಮೀರ್‌ಪುರದಲ್ಲಿ ಬಿಜೆಪಿ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ಸೋತಿದೆ.

Home add -Advt

ಕಾಂಗ್ರೆಸ್ ಬಾರ್ಸರ್ ಕ್ಷೇತ್ರವನ್ನು 13,792 ಮತಗಳಿಂದ, ನಾದೌನ್‌ನಲ್ಲಿ 3,363 ಮತಗಳಿಂದ, ಸುಜಾನ್‌ಪುರ್‌ನಲ್ಲಿ 399 ಮತಗಳಿಂದ ಮತ್ತು ಭೋರಂಜ್‌ನಲ್ಲಿ 60 ಮತಗಳಿಂದ ಜಯಗಳಿಸಿದೆ.

ಹಮೀರ್‌ಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆಶಿಶ್ ಶರ್ಮಾ ಗೆಲುವು ಸಾಧಿಸಿದ್ದಾರೆ. ಠಾಕೂರ್ ತಂದೆ ಪಿ.ಕೆ. ಧುಮಾಳ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತು.

ಮೋದಿ ಮಂತ್ರಿಮಂಡಳದ ಪ್ರಭಾವಿ ಯುವ ನಾಯಕರಲ್ಲಿ ಒಬ್ಬರಾದ ಅನುರಾಗ್ ಅವರಿಗೆ ಈ ವಿದ್ಯಮಾನ ಪಕ್ಷದಲ್ಲಿ ಭಾರೀ ಹಿನ್ನಡೆಗೆ ಕಾರಣವಾಗಿದೆ.

ಗಡಿ ವಿವಾದದ ಬೆನ್ನಲ್ಲೇ ಭಾಷಾಧ್ವೇಷದ ಕಿಚ್ಚು; ಅಧಿವೇಶನದಂದೇ ಬೆಳಗಾವಿಯಲ್ಲಿ ಮಹಾಮೇಳಾವ್ ಆಯೋಜಿಸಿದ MES

Related Articles

Back to top button