Kannada NewsKarnataka News

*ವಾಮಾಚಾರಕ್ಕಾಗಿ ತಾನೇ ಸಾಕಿದ್ದ ನಾಯಿಗಳನ್ನು ಕೊಂದ ಮಹಿಳೆ*

ಪ್ರಗತಿವಾಹಿನಿ ಸುದ್ದಿ; ವಾಮಾಚಾರಕ್ಕಾಗಿ ತಾನೇ ಸಾಕಿದ್ದ ನಾಯಿಗಳನ್ನು ಮಹಿಳೆ ಹತ್ಯೆಗೈದು ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಹದೇವಪುರ ಬಳಿಯ ಚಿನ್ನಪ್ಪ ಲೇಔಟ್ ನಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿರುವ ಪಶ್ಚಿಮ ಬಂಗಾಳ ಮೂಲದ ಮಹಿಳೆ ತ್ರಿಪರ್ಣಾ ಎಂಬುವವರು ನಾಯಿಗಳನ್ನು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮನೆಯಬಳಿ ದುರ್ವಾಸನೆ ಬರುತ್ತಿದ್ದ ಕಾರಣಕ್ಕೆ ಅಪಾರ್ಟ್ ಮೆಂಟ್ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಮಹಿಳೆಯ ಮನೆಯಲ್ಲಿ ನಾಯಿ ಕಳೆಬರಹ ಪತ್ತೆಯಾಗಿದೆ. ನಾಯಿ ಮರಣೋತ್ತರ ವರದಿಯಲ್ಲಿ ನಾಲ್ಕು ದಿನಗಳ ಹಿಂದೆಯೇ ನಾಯಿಯನ್ನು ಹತ್ಯೆ ಮಾಡಿರುವುದು ದೃಢಪಟ್ಟಿದೆ.

ಮಹಿಳೆ ವಾಮಾಚಾರಕ್ಕಾಗಿ ತಾನೇ ಸಾಕಿದ್ದ ನಾಯಿಗಳನ್ನು ಹತ್ಯೆ ಮಾಡುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಮಹಿಳೆ ತನ್ನ ಮನೆಯಲ್ಲಿ ನಾಲ್ಕು ಲ್ಯಾಬ್ರಿಡಾರ್ ನಾಯಿಗಳನ್ನು ಸಾಕಿದ್ದರು. ನಾಲ್ಕು ತಿಂಗಳ ಹಿಂದೆ ಒಂದು ನಾಯಿ ನಾಪತ್ತೆಯಾಗಿತ್ತು. ಇದೀಗ ಮತ್ತೊಂದು ನಾಯಿಯನ್ನು ಮಹಿಳೆಯೇ ಹತ್ಯೆ ಮಾಡಿದ್ದಾರೆ. ಮಹಿಳೆಯ ವಿಚಿತ್ರ ನಡೆ ಅಪಾರ್ಟ್ ಮೆಂಟ್ ನಿವಾಸಿಗಳನ್ನು ಭಯಭೀತರನ್ನಾಗಿಗಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button