
ಕಾಕತಿ ಬಳಿ ಗ್ರಾನೈಟ್ ಕಂಪನಿ ಮ್ಯಾನೇಜರ್ ಶವ ಪತ್ತೆ
https://youtu.be/f_9vDlItcTk
ಪ್ರಗತಿವಾಹಿನಿ ಸುದ್ದಿ, ಅಗಸಗಿ:
ತಾಲೂಕಿನ ಕಾಕತಿ ಗ್ರಾಮದ ಶಾಸ್ತ್ರಿ ನಗರದ ನಿವಾಸಿ ಮಾರುತಿ ಹಳಿಮನಿ(52) ಸಂಶಯಾಸ್ಪದ ಸಾವನಪ್ಪಿದ್ದು, ಬುಧವಾರ ಮುಂಜಾನೆ ಕಾಕತಿ ಗ್ರಾಮದ ಮಾರ್ಕಂಡೇಯ ನದಿಯ ಹತ್ತಿರ ಇರುವ ನೀರಿನ ತಗ್ಗಿನಲ್ಲಿ ಶವ ಪತ್ತೆಯಾಗಿದೆ.
ಮಾಹಿತಿ ಸಿಕ್ಕ ನಂತರ ಸ್ಥಳಕ್ಕೆ ಧಾವಿಸಿದ ಕಾಕತಿ ಎಎಸ್ಐ ನವಲೆ ಮತ್ತು ಸಿಬ್ಬಂದಿ ಸಮ್ಮುಖದಲ್ಲಿ ಶವ ಹೊರಕ್ಕೆ ತೆಗೆದು ಕುಂಟುಂಬದವರಿಂದ ಪ್ರಕರಣ ದಾಖಲಿಸಿಕೊಂಡಿದ್ದು, ಶವಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ.
ಘಟನೆ ವಿವರ-
ಮೃತ ಮಾರುತಿ ಹೊನಗಾ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಗ್ರೆನೈಟ್ ಕಂಪನಿಯೊಂದರಲ್ಲಿ ಮ್ಯಾನೇಜರಾಗಿ ಕೆಲಸ ಮಾಡುತ್ತಿದ್ದು, ಮಳೆಯ ಕಾರಣದಿಂದಾಗಿ ಕಳೆದ 2 ದಿನಗಳಿಂದ ಕಂಪನಿಗೆ ರಜೆಯಿದ್ದು ಮನೆಯಲ್ಲಿಯೇ ಇದ್ದ. ಸಂಜೆ ವೇಳೆಗೆ ಕಾಕತಿಯಿಂದ ಮಾರ್ಕಂಡೇಯ ಸಕ್ಕರೆ ಕಾರ್ಖಾನೆಯ ರಸ್ತೆ ಪಕ್ಕದಲ್ಲಿರುವ ನೀರು ತುಂಬಿದ ಗುಂಡಿಯಲ್ಲಿ ಬಿದ್ದು ಸಾವನಪ್ಪಿರುವ ಬಗ್ಗೆ ಮಾಹಿತಿ ಬಂದಿದೆ. ಕುಟುಂಬದವರಿಂದ ಯಾವುದೇ ಸಂಶಯ ವ್ಯಕ್ತವಾಗದ ಕಾರಣ ಆಕಸ್ಮಿಕ ಸಾವು ಎಂದು ಪೋಲೀಸರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ