Latest

ಮತ್ತೆ ರೆಡ್ ಲೈಟ್ ಏರಿಯಾದಲ್ಲಿ ಸುದ್ದಿಯಾದ ನಟಿ ಶ್ವೇತಾ

ಪ್ರಗತಿವಾಹಿನಿ ಸುದ್ದಿ; ಮುಂಬೈ: 2014ರಲ್ಲಿ ವೇಶ್ಯಾವಾಟಿಕೆ ಆರೋಪದಡಿ ಬಂಧನಕ್ಕೊಳಗಾಗಿದ್ದ ಖ್ಯಾತ ನಟಿ ಶ್ವೇತಾ ಬಸುಪ್ರಸಾದ್, ಇದೀಗ ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ ಸಂಚರಿಸಿ ಮತ್ತೆ ಸುದ್ದಿಯಾಗಿದ್ದಾರೆ.

ಬಾಲನಟಿಯಾಗಿದ್ದಾಗಲೇ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಶ್ವೇತಾ, ಈ ಬಾರಿ ಸುದ್ದಿಯಾಗಿರುವುದು ಸಿನಿಮಾ ಕಾರಣದಿಂದ. ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾಗದ ಕ್ಷೇತ್ರಗಳಿಲ್ಲ. ಇದಕ್ಕೆ ಸೆಕ್ಸ್ ವರ್ಕರ್ಸ್ ಗಳ ಸಂಕಷ್ಟವೂ ಹೊರತಾಗಿಲ್ಲ. ಈ ಕರಾಳ ಲೋಕದಲ್ಲಂತೂ ಲಾಕ್ ಡೌನ್ ಸಂದರ್ಭ ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ತಂದಿದೆ ಎನ್ನಲಾಗಿದೆ.

Home add -Advt

ರೆಡ್ ಲೈಟ್ ಏರಿಯಾದ ಸಂಕಷ್ಟ ಆಧರಿಸಿ ನಿರ್ದೇಶಕ ಮಧುಭಂಡಾರ್ಕರ್ ಇಂಡಿಯಾ ಲಾಕ್ ಡೌನ್ ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟಿಸುತ್ತಿರುವ ಶ್ವೇತಾಬಸುಪ್ರಸಾದ್, ಮುಂಬೈ ರೆಡ್ ಲೈಟ್ ಏರಿಯಾದ ಬದುಕು-ಬವಣೆ ಅರಿಯಲು ನಿರ್ದೇಶಕರ ಜೊತೆ ಅಲ್ಲಿಗೆ ಭೇಟಿ ನೀಡಿದ್ದಾರೆ.

ಚಿತ್ರದಲ್ಲಿ ಮೆಹ್ರುನಿಸಾ ಎಂಬ ಲೈಂಗಿಕ ಕಾರ್ಯಕರ್ತೆಯ ಪಾತ್ರಕ್ಕೆ ನಾನು ಬಣ್ಣಹಚ್ಚುತ್ತಿದ್ದೇನೆ. ಪಾತ್ರಕ್ಕೆ ಜೀವತುಂಬಿ ಪ್ರೇಕ್ಷಕರಿಗೆ ಕನೆಕ್ಟ್ ಆಗಲು ಅವರ ಬದುಕನ್ನು ಹತ್ತಿರದಿಂದ ಗಮನಿಸುವ ಸಲುವಾಗಿ ರೆಡ್ ಲೈಟ್ ಏರಿಯಾಗೆ ಭೇಟಿ ನೀಡಿದ್ದಾಗಿ ತಿಳಿಸಿದ್ದಾರೆ.

Related Articles

Back to top button