Kannada NewsKarnataka NewsLatest

ಮಾ.10ರಂದು ಪುಸ್ತಕ ಬಿಡುಗಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿನ ಹಿಂದವಾಡಿಯ ಅಕಾಡೆಮಿ ಆಫ್ ಕಂಪೆರೇಟೀವ್ ಫಿಲಾಸಫಿ ಆ್ಯಂಡ್ ರಿಲಿಜನ್ ವತಿಯಿಂದ ರಾನಡೆ ಮಂದಿರದ ಸಭಾಗೃಹದಲ್ಲಿ ಮಾ.10 ರಂದು ಮಧ್ಯಾಹ್ನ 3 ಗಂಟೆಗೆ ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ.

ಗುರುದೇವ ಡಾ.ಆರ್.ಡಿ.ರಾನಡೆ ಅವರ ಆಂಗ್ಲ ಕೃತಿ ‘Path way to God in Hindi Literature’ನ ಅನುವಾದಿತ ಕೃತಿ ‘ಹಿಂದಿ ಸಂತ ಸಾಹಿತ್ಯದಲ್ಲಿ ಪರಮಾರ್ಥ ಮಾರ್ಗ’ ಗ್ರಂಥ ಬಿಡುಗಡೆಗೊಳಿಸಲಾಗುವುದು.

Home add -Advt

ಶೈಲಾ ಎಸ್.ಎಂ.ಪಾಟೀಲ ಅವರು ಅನುವಾದಿಸಿದ ಈ ಗ್ರಂಥವನ್ನು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನ ಕಣೇರಿ ಸಿದ್ಧಗಿರಿ ಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ಗ್ರಂಥ ಲೋಕಾರ್ಪಣೆಗೊಳಿಸುವರು.

ಬೆಳಗಾವಿಯ ಎಂಎನ್ಆರ್ ಎಸ್, ಸಾಗರ, ಜೆಎಂಎಂ (ಮಹಿಳಾ), ಚಂದ್ರಗಿರಿ (ಮಹಿಳಾ), ಕೆಎಲ್ಇ, ಶೇಖ್, ಕೆಎಸ್ಆರ್ ಹಾಗೂ ಸರಕಾರಿ ಬಿಎಡ್ ಕಾಲೇಜುಗಳ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದು ಅಕಾಡೆಮಿ ಆಫ್ ಕಂಪೆರೇಟೀವ್ ಫಿಲಾಸಫಿ ಆ್ಯಂಡ್ ರಿಲಿಜನ್ ಅಧ್ಯಕ್ಷ ಅಶೋಕ ಪೋತದಾರ ಹಾಗೂ ಕಾರ್ಯದರ್ಶಿ ಮಾರುತಿ ಬಿ. ಝಿರಲಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

https://pragati.taskdun.com/role-of-youth-in-building-a-strong-india-is-important-historian-shivananda-helavara/
https://pragati.taskdun.com/a-woman-tried-to-commit-suicide-by-drinking-phenol-to-her-three-children-in-the-premises-of-the-district-collectors-office/
https://pragati.taskdun.com/belgaum-kidney-check-up-camp-tomorrow/

Related Articles

Back to top button