ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಮುಖ್ಯಮಂತ್ರಿ ಬಸವರಾಜ ಬೋಮ್ಮಾಯಿ ಇವರ ನೇತೃತ್ವಲ್ಲಿಯ ಬಿಜೆಪಿ ಸರ್ಕಾರವು ಬಡ ಜನರ ಅಭಿವೃದ್ಧಿಗೆ ಹೇಚ್ಚಿನ ಆಧ್ಯತೆ ನಿಡುತ್ತಿದೆ.ಮುಜರಾಯಿ ಇಲಾಖೆಯು ಪಂಡರಪುರ,ಗುಡ್ಡಾಪುರ,ಹಾಗೂ ಶ್ರಿಶೈಲಂ ಕ್ಷೇತ್ರಗಳಲ್ಲಿ ಕರ್ನಾಟಕ ಭವನ ನಿರ್ಮಿತಿಗೆ ಪ್ರಯತ್ನಿಸುತ್ತಿದು,ಶೀಘ್ರವೇ ಭೂಮಿಪೂಜೆ ನೇರವೇರಿಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೋಲ್ಲೆ ಹೇಳಿದರು.
ಬುಧುವಾರ ಪಟ್ಟಣದ ವಾಶಿಖಾನ ಮಂದಿರದಲ್ಲಿ ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಇಲಾಖೆ ವತಿಯಿಂದ ಬೋರಗಾಂವ ಪಟ್ಟಣದಲ್ಲಿ 397, ಭೋರಗಾಂವವಾಡಿ ಗ್ರಾಮದಲ್ಲಿ 66, ಕಸನಾಳ 84, ದೋಣೆವಾಡಿ 150, ಒಟ್ಟು 697 ಜನರಿಗೆ ಆಹಾರ ಕೀಟ ವಿತರಿಸಲಾಯಿತು.
ನಿಪ್ಪಾಣಿ ಕ್ಷೇತ್ರದಲ್ಲಿಯ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಅನುದಾನ ಮಂಜೂರಾಗಿದ್ದು ಮಳೆಗಾಲ ನಂತರ ಕಾಮಗಾರಿ ಪ್ರಾರಂಭಿಸಲಾಗುವು. ಅಂಗವಿಕಲ,ವಿಧವೆಯರಿಗೆ,ಹಿರಿಯ ನಾಗರಿಕರಿಗೆ ತಿಂಗಳ ಪಿಂಚಣಿ ಹೇಚ್ಚಿಸಲಾಗಿದೆ.ತಿರುಪತಿಯಲ್ಲಿ ಕೂಡ ಯಾತ್ರಿ ನಿವಾಸ ನಿರ್ಮಾಣಕ್ಕೆ ಪ್ರಯತ್ನಿಸಲಾಗುವದು.ಪಟ್ಟಣದಲ್ಲಿಯ ಅಂಗವಿಕಲಿಗೆ,ಪತ್ರಕರ್ತರಿಗೆ,ಬೂಥ ಸದಸ್ಯರಿಗೆ,ಅಂಗಣವಾಡಿ,ಆಶಾ,ಕಟ್ಟಡ ಕಾರ್ಮಿಕ ಸೇರಿದಂತೆ ಹೇಸ್ಕಾಂ ಸಿಬ್ಬಂದಿಯವರಿಗೆ 397 ಜನರಿಗೆ ಆಹಾರ ಕಿಟ ವಿತರಿಸಲಾಗಿದ್ದು,ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನಿಡಲಾಗಿದೆ ಎಂದು ಸಚಿವೆ ಜೋಲ್ಲೆ ಹೇಳಿದರು.
ಬಿಜೆಪಿ ಗ್ರಾಮೀಣ ಅಧ್ಯಕ್ಷ ಪವನ ಪಾಟೀಲ,ಮಹಿಲಾ ಮೋರ್ಚಾ ಅಧ್ಯಕ್ಷೆ ಸರೋಜನಿ ಜಮದಾಡೆ ಮಾತನಾಡಿದರು. ಈ ಸಂದರ್ಭದಲ್ಲಿ ಹಾಲಶುಗರ ನಿರ್ದೇಶಕ ರಾಮಗೋಂಡಾ ಪಾಟೀಲ,ಪ.ಪಂ.ಮಾಜಿ ಸದಸ್ಯೆ ಮಿನಾ ಭಾದುಲೆ,ಮುಖಂಡ ದಾದಾ ಭಾದುಲೆ,ರಾಣಿ ಬೇವಿನಕಟ್ಟಿ,ಬಿಸಮಿಲ್ಲಾ ಅಫರಾಜ,ಬಾಬಾಸೋ ಚೌಗುಲೆ,ಶೇಷು ಐದಮಾಳೆ,ಪರವೇಜ ಅಫರಾಜ,ಶೀವಾಜಿ ಭೋರೆ,ಪಂಡೀತ ಹಿರೇಮಣಿ,ಜಮೀಲ ಅತ್ತಾರ,ಮಹಪತಿ ಖೋತ,ವಿಷ್ಣು ತೋಡಕರ,ರಮೇಶ ಮಾಲಗಾಂವೆ,ಅಯುಬ ಮಕಾಂದರ,ಅನ್ನಪ್ಪ ಡಕರೆ,ಫಿರೋಜ ಅಫರಾಜ, ದೊಂಡಿರಾ ಭೋರೆ,ನಾರಾಯಣ ಅಡೇಕರ,ಕಾಕಾಸಾಬ ವಾಘಮೋಡೆ ಹಾಜರಿದ್ದರು.ಆರ.ಎಸ.ಪಚಂಡಿ ನಿರೂಪಿಸಿದರು.ರಾಜು ಕುಂಭಾರ ವಂದಿಸಿದರು.
ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ 650 ಹಳ್ಳಿಗಳಲ್ಲಿ ಡಿಜಿಟಲ್ ಸೇವಾ ಕೇಂದ್ರ ತೆರೆಯುವ ಗುರಿ: ಸಂಸದ ಅಣ್ಣಾಸಾಹೇಬ ಜೊಲ್ಲೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ