Kannada NewsKarnataka NewsLatest

ಶಿಕ್ಷಕರ ವರ್ಗಾವಣೆಗೆ ಬ್ರೇಕ್: ಆಡಳಿತಾತ್ಮಕ ಬಿಕ್ಕಟ್ಟು ಸಾಧ್ಯತೆ

ಶಿಕ್ಷಕರ ವರ್ಗಾವಣೆಗೆ ಬ್ರೇಕ್: ಆಡಳಿತಾತ್ಮಕ ಬಿಕ್ಕಟ್ಟು ಸಾಧ್ಯತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಕೊನೆಯ ಹಂತದಲ್ಲಿರುವ ವರ್ಗಾವಣೆ ಪ್ರಕ್ರಿಯೆಗೆ ಹೊಸ ಸರಕಾರ ಬ್ರೇಕ್ ಹಾಕಿದೆ.

ನೂತನ ಶಿಕ್ಷಣ ಸಚಿವ ಸುರೇಶ ಕುಮಾರ ಸೂಚನೆ ಮೇರೆಗೆ ಶಿಕ್ಷಣ ಇಲಾಖೆ ಅಳಿದುಳಿದ ವರ್ಗಾವಣೆ ಪ್ರಕ್ರಿಯೆ ತಡೆಹಿಡಿದಿದೆ. ಇನ್ನು ಉಳಿದಿದ್ದು ಕಡ್ಡಾಯ ವರ್ಗಾವಣೆ ಮಾತ್ರ. ಅದಕ್ಕೆ ಈಗ ತಡೆ ಬಿದ್ದಿದೆ.

ಮುಂದಿನ ಸೂಚನೆಯವರೆಗೆ ವರ್ಗಾವಣೆ ಪ್ರಕ್ರಿಯೆಗಳನ್ನು ತಡೆಹಿಡಿಯುವಂತೆ ಆದೇಶಿಸಲಾಗಿದೆ. ಇದರಿಂದಾಗಿ, ಕಡ್ಡಾಯ ವರ್ಗಾವಣೆಗೊಳ್ಳಬೇಕಾದ ನಗರ ಶಿಕ್ಷಕರ ಲಾಬಿಗೆ ಸರಕಾರ ಮಣಿಯಿತೇ ಎನ್ನುವ ಸಂಶಯ ಬರುವಂತಾಗಿದೆ.

Home add -Advt

ಆದರೆ, ಈ ಹಂತದಲ್ಲಿ ವರ್ಗಾವಣೆ ಪ್ರಕ್ರಿಯೆ ತಡೆಹಿಡಿಯುವುದು ಆಡಳಿತಾತ್ಮಕ ಬಿಕ್ಕಟ್ಟಿಗೆ ಕಾರಣವಾಗುವ ಆತಂಕ ಎದುರಾಗಿದೆ. ಏಕೆಂದರೆ, ಕಡ್ಡಾಯ ವರ್ಗಾವಣೆಯಾಗಿ ಹೋಗುವ ಶಿಕ್ಷಕರ ಜಾಗಕ್ಕೆ ಕೋರಿಕೆ ವರ್ಗಾವಣೆ ಶಿಕ್ಷಕರನ್ನು ಈಗಾಗಲೆ ವರ್ಗಾಯಿಸಲಾಗಿದೆ. ಈಗ ಅವರ ಸ್ಥಿತಿ-ಗತಿ ಏನು ಎನ್ನುವ ಪ್ರಶ್ನೆ ಎದುರಾಗಿದೆ.

ಅಂದರೆ, ಈ ಹಂತದಲ್ಲಿ ವರ್ಗಾವಣೆ ತಡೆಹಿಡಿಯಲು ಹೋದರೆ, ಈವರೆಗೆ ನಡೆದಿರುವ ಎಲ್ಲ ವರ್ಗಾವಣೆ ಪ್ರಕ್ರಿಯೆಯನ್ನೂ ರದ್ಧುಪಡಿಸುವ ಅನಿವಾರ್ಯತೆ ಬರಬಹುದು. ಇಲ್ಲವಾದಲ್ಲಿ ಇದು ಆಡಳಿತಾತ್ಮಕ ಬಿಕ್ಕಟ್ಟಿಗೆ ಕಾರಣವಾಗಬಹುದು.

ಸಂಪೂರ್ಣ ಪರಾಮರ್ಶೆ ಅಗತ್ಯ

ಶಿಕ್ಷಕರ ವರ್ಗಾವಣೆ ಶತಮಾನದ ದೊಡ್ಡ ಸಮಸ್ಯೆಯೇನೋ ಎನ್ನುವ ಸ್ಥಿತಿ ತಲುಪಿದೆ. ಪರಿಪೂರ್ಣ ಪರಿಹಾರ ಯಾರಿಂದಲೂ ಸಾಧ್ಯವಿಲ್ಲ. ಆದರೆ, ಇರುವ ನಿಯಮಾವಳಿಯಲ್ಲೇ ತಾಂತ್ರಿಕ ಸಮಸ್ಯೆಗಳಾಗದಂತೆ ಮಾಡಬೇಕಾದ ಅನಿವಾರ್ಯತೆ ಇದೆ. ಅದಕ್ಕೆ ಸಮಗ್ರ ಅಧ್ಯಯನ ಬೇಕು.

ನೂತನ ಶಿಕ್ಷಣ ಸಚಿವರು ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರಂತವರ ಸಲಹೆ ಪಡೆದು ಇದ್ಕಕೊಂದು ಪರಿಹಾರ ಕಂಡುಕೊಳ್ಳಬೇಕು. ಯಾರದ್ದೂ ಮರ್ಜಿ ಕಾಯದೆ ಮುಂದಡಿ ಇಡಬೇಕು.

ಈವರೆಗೆ ಶಿಕ್ಷಕರ ಸಂಘದ ನಿಯಂತ್ರಣದಲ್ಲೇ ವರ್ಗಾವಣೆ ನಡೆಯುತ್ತಿದೆ. ಸಂಘದ ಪದಾಧಿಕಾರಿಗಳು ಕೆಲವೇ ಕೆಲವು ಬಲಾಢ್ಯರ ಮರ್ಜಿ ಕಾಯುವ ಸಾಧ್ಯತೆಯೇ ಹೆಚ್ಚು. ಕುಗ್ರಾಮಗಳಲ್ಲಿ ಕೆಲಸ ಮಾಡುವ ಬಡ ಶಿಕ್ಷಕರ ಬೆಂಬಲಕ್ಕೆ ನಿಲ್ಲಬೇಕಾದ ಗಟ್ಟಿ ನಿರ್ಧಾರವನ್ನು ನೂತನ ಶಿಕ್ಷಣ ಸಚಿವರು ತೆಗೆದುಕೊಳ್ಳಬೇಕು.

ಹತ್ತಾರು ವರ್ಷಗಳಿಂದ ನಗರ ಪ್ರದೇಶದಲ್ಲೇ ಬೀಡು ಬಿಟ್ಟಿರುವ ಶಿಕ್ಷಕರನ್ನು ಮುಲಾಜಿಲ್ಲದೆ ಎತ್ತಬೇಕು. ಅವರ ಒತ್ತಡಗಳಿಗೆ ಬಲಿಯಾಗಬಾರದು. ತಪ್ಪು ಮಾಹಿತಿ ನೀಡಿ ವರ್ಗಾವಣೆ ಪಡೆಯಲೆತ್ನಿಸುವವರ ವಿರುದ್ಧ ಕಠಿಣ ಕ್ರಮವಾಗಬೇಕು.  ಅಂದಾಗ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ.(ಪ್ರಗತಿವಾಹಿನಿ ಸುದ್ದಿ)

(ಪ್ರತಿಕ್ರಿಯೆ ನೀಡಿ – ವಾಟ್ಸಪ್ 8197712235, hegdemk@gmail.com)

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಎಲ್ಲ ಗ್ರುಪ್ ಗಳಿಗೆ ಶೇರ್ ಮಾಡಿ)

ಸಂಬಂಧಿಸಿದ ಸುದ್ದಿಗಳು – ಅಕ್ಟೋಬರ್ ನಲ್ಲಿ ಮತ್ತೆ ನಡೆಯುತ್ತಾ ಶಿಕ್ಷಕರ ವರ್ಗಾವಣೆ?

ಶಿಕ್ಷಕರ ವರ್ಗಾವಣೆಯಲ್ಲಿ ಭಾರಿ ಗೋಲ್ ಮಾಲ್

ಇದ್ಯಾವ ವರ್ಗಾವಣೆ ನೀತಿ ?- ಶಿಕ್ಷಕರ ಆಕ್ರೋಶ

ಶಿಕ್ಷಕರ ವರ್ಗಾವಣೆ ತಿದ್ದುಪಡಿ ವಿಧೇಯಕ: ಕೊನೆಗೂ ಲಾಬಿಗೆ ಮಣಿದ ಸರಕಾರ!

Related Articles

Back to top button