Kannada NewsKarnataka NewsNational
*ಟ್ರ್ಯಾಕ್ಟರ್ಗೆ ಡಿಕ್ಕಿಯಾಗಿ ಕಂದಕಕ್ಕೆ ಉರುಳಿದ ಬಸ್: ಐವರ ಸಾವು*

ಪ್ರಗತಿವಾಹಿನಿ ಸುದ್ದಿ: ಮುಂಬೈ-ಪುಣೆ ಎಕ್ಸ್ಪ್ರೆಸ್ವೇಯಲ್ಲಿ ಟ್ರ್ಯಾಕ್ಟರ್ಗೆ ಡಿಕ್ಕಿಯಾದ ಬಸ್ ಕಂದಕಕ್ಕೆ ಉರುಳಿ ಬಿದ್ದು ಐದು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ
ಮಂಗಳವಾರ ರಾತ್ರಿ ನಡೆದ ಈ ದುರ್ಘಟನೆಯಲ್ಲಿ 5 ಜನ ಸಾವನ್ನಪ್ಪಿದರೆ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳನ್ನು ಹತ್ತಿರದ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನವಿ ಮುಂಬೈ ಪೊಲೀಸ್ನ ಡಿಸಿಪಿ ಪಂಕಜ್ ದಹಾನೆ ತಿಳಿಸಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದೆ. ಯಾತ್ರಾರ್ಥಿಗಳು ಏಕಾದಶಿ ಹಬ್ಬದ ಆಚರಣೆಗಾಗಿ ಡೊಂಬಿವಲಿಯ ಕೇಸರ್ ಗ್ರಾಮದಿಂದ ಪಂಡರಾಪುರಕ್ಕೆ ಸಾಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
ಕ್ರೇನ್ ಸಹಾಯದಿಂದ ಬಸ್ ಮೇಲಕ್ಕೆತ್ತಲಾಯಿತು. ಇದರಿಂದಾಗಿ ಮುಂಬೈ ಎಕ್ಸ್ಪ್ರೆಸ್ ಹೆದ್ದಾರಿಯ ಮುಂಬೈ-ಲೋಣಾವಳ ಲೇನ್ನಲ್ಲಿ ಮೂರು ತಾಸುಗಳ ಬಳಿಕ ಸಂಚಾರ ಆರಂಭ ಆಗಿದೆ.



