Latest

ಸ್ವಾಮೀಜಿಗಳ ಮೂಲಕ ಸಂಧಾನಕ್ಕೆ ಯತ್ನಿಸಿದ್ರಾ ಸಿ.ಪಿ.ಯೋಗೇಶ್ವರ್…?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧವೇ ಭಿನ್ನರಾಗ ಹಾಡಿರುವ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಸಂಪುಟದಿಂದ ಕೈಬಿಡಬೇಕು ಎಂಬ ಆಗ್ರಹಗಳು ಕೇಳಿಬಂದ ಬೆನ್ನಲ್ಲೆ ಎಚ್ಚೆತ್ತ ಯೋಗೇಶ್ವರ್ ಇದೀಗ ಸ್ವಾಮೀಜಿಗಳ ಮೂಲಕ ಸಂಧಾನ ನಡೆಸಲು ಯತ್ನಿಸಿದ್ದಾರೆ ಎನ್ನಲಾಗಿದೆ.

ತಮ್ಮ ವಿರುದ್ಧ ಸಹಿ ಸಂಗ್ರಹ ಹಾಗೂ ಕೆಲ ಸ್ವಾಮಿಜಿಗಳೂ ತಮ್ಮನ್ನು ಸಂಪುಟದಿಂದ ಕೈಬಿಡಲು ಸೂಚಿಸಿದ ಬೆನ್ನಲ್ಲೇ ಇದೀಗ ಸಿ.ಪಿ.ಯೋಗೇಶ್ವರ್ ರಾಮನಗರದ ಬಿಜಿಎಸ್ ಶಾಖಾ ಮಠಕ್ಕೆ ಭೇಟಿ ನೀಡಿ ನಿರ್ಮಲಾನಂದ ಸ್ವಾಮಿಜಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

Home add -Advt

ಈ ವೇಳೆ ಮಾತನಾಡಿದ ಸಚಿವ ಯೋಗೇಶ್ವರ್, ನಾನು ಆಗಾಗ ಸ್ವಾಮೀಜಿ ಭೇಟಿಯಾಗುತ್ತೇನೆ. ಇನ್ನೂ ನಾಲ್ವರು ಸ್ವಾಮಿಜಿಗಳನ್ನು ಭೇಟಿ ಮಾಡುತ್ತಿದ್ದೇನೆ. ನನ್ನ ಕೆಲ ಸ್ನೇಹಿತರು ಮನಸ್ಸಿಗೆ ನೋವಾಗುವಂತೆ ಮಾತನಾಡುತ್ತಿದ್ದಾರೆ. ಮಾತನಾಡಲು ಬಹಳ ವಿಷಯಗಳಿವೆ. ಆದರೆ ರಾಜಕೀಯವಾಗಿ ಈಗೇನೂ ಮಾತನಾಡಲ್ಲ. ಯಾರು ಯಾವಾಗ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬುದನ್ನು ಈಗ ಹೇಳಲ್ಲ ಎಂದು ತಿಳಿಸಿದರು.
ಕೊರೋನಾ: ನಾಲ್ವರು ಆತ್ಮಹತ್ಯೆಗೆ ಶರಣು

Related Articles

Back to top button