*ಮರಕ್ಕೆ ಕಾರು ಡಿಕ್ಕಿ: ಬೆಳಗಾವಿಯ ಇಬ್ಬರು ಯುವಕರ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಮರಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿ, ಓರ್ವ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ನಡೆದಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಬೆಳಗಾವಿ-ಬಾಗಲಕೋಟೆ ಮುಖ್ಯ ರಸ್ತೆಯ ಸೋಮನಟ್ಟಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.
ಸ್ವಿಫ್ಟ್ ಡಿಸೈರ್ ಕಾರು ಯರಗಟ್ಟಿ ಕಡೆಯಿಂದ ಬೆಳಗಾವಿ ಕಡೆ ತೆರಳುವಾಗ ಸೋಮನಟ್ಟಿ ಗ್ರಾಮದ ಬಳಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಯಾಗಿ ಈ ದುರ್ಘಟನೆ ಸಂಭವಿಸಿದೆ
ಈ ಅಪಘಾತದಲ್ಲಿ ಬೆಳಗಾವಿ ತಾಲೂಕಿನ ಕರಿಕಟ್ಟಿ ಗ್ರಾಮದ ಯುವಕ ಸಚಿನ್ ಯಲ್ಲಪ್ಪ ಬೋರಿಮರದ (21) ಹಾಗೂ ಬಾಲಕೃಷ್ಣ ಬಸಪ್ಪ ಸುಲದಾಳ (19) ಮೃತರು. ಲಕ್ಕಪ್ಪ ಯಲ್ಲಪ್ಪ ಬೋರಿಮರದ (23) ಗಾಯಗೊಂಡಿದ್ದು, ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಡಿ ವೈ ಎಸ್ ಪಿ ಡಾ.ವೀರಯ್ಯ ಹಿರೇಮಠ, ಪಿ ಐ ಗಜಾನನ ನಾಯ್ಕ, ಪಿ ಎಸ್ ಐ ಈರಪ್ಪ ರಿತ್ತಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದರು.
ಗಾಯಳುಗಳನ್ನು ಆಸ್ಪತ್ರೆ ಗೆ ಸಾಗಿಸುವಲ್ಲಿ ಪೊಲೀಸರು ಹಾಗೂ ಗ್ರಾಮಸ್ಥರು ನೇರವಾದರು. ನೇಸರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.