Kannada NewsLatestWorld

*ಹನಿಮೂನ್ ಗೆ ಹೊರಟಿದ್ದ ದಂಪತಿ: ಹೆಲಿಕಾಪ್ಟರ್ ದುರಂತದಲ್ಲಿ ಪತಿ ಸಾವು; ಪತ್ನಿ ಸ್ಥಿತಿ ಗಂಭೀರ*

ಪ್ರಗತಿವಾಹಿನಿ ಸುದ್ದಿ: ಹನಿಮೂನ್‌ಗೆ ತೆರಳುತ್ತಿದ್ದ ಭಾರತೀಯ ಮೂಲದ ಯುವ ಪೈಲಟ್ ಹೆಲಿಕಾಪ್ಟರ್ ಪತನಗೊಂಡು ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ.

ಅಮೆರಿಕಾದ ಜಾರ್ಜಿಯಾದಲ್ಲಿ ಭೀಕರ ಹೆಲಿಕಾಪ್ಟರ್ ಅಪಘಾತ ಸಂಭವಿಸಿದ್ದು, ವಿವಾಹವಾಗಿ ಇನ್ನೇನು ಹೊಸ ಜೀವನಕ್ಕೆ ಕಾಲಿಡಬೇಕು ಎನ್ನುವಷ್ಟರಲ್ಲೇ ನವದಂಪತಿಗೆ ಈ ದುರಂತ ಎದುರಾಗಿದೆ.

Home add -Advt

ಮೃತಪಟ್ಟವರನ್ನು 26 ವರ್ಷದ ಡೇವ್ ಫಿಜಿ ಎಂದು ಗುರುತಿಸಲಾಗಿದೆ. ಡೆಲ್ಟಾ ಏರ್‌ಲೈನ್ಸ್‌ನಲ್ಲಿ ಸಹ-ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಮೂಲತಃ ಕೇರಳದವರು ಎಂದು ತಿಳಿದುಬಂದಿದೆ. 

ಮದುವೆಯ ಸಂಭ್ರಮ ಮುಗಿಸಿ, ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವದಂಪತಿ ಹನಿಮೂನ್‌ಗೆ ಹೊರಟಿದ್ದಾಗ ಈ ದುರ್ಘಟನೆ ನಡೆದಿದೆ. ದಂಪತಿ ಪ್ರಯಾಣಿಸುತ್ತಿದ್ದ `Robinson R66′ ಹೆಲಿಕಾಪ್ಟರ್ ಡಾಸನ್‌ವಿಲ್ಲೆ ಮದುವೆ ಮಂಟಪದ ಬಳಿಯೇ ಪತನಗೊಂಡಿದೆ.

ಈ ಭೀಕರ ಅಪಘಾತದಲ್ಲಿ ಹೆಲಿಕಾಪ್ಟರ್‌ನ ಮುಖ್ಯ ಪೈಲಟ್ ಕೂಡ ಸಾವನ್ನಪ್ಪಿದ್ದು, ಅವರ ಗುರುತು ಇನ್ನೂ ಪತ್ತೆಯಾಗಿಲ್ಲ. ಅಪಘಾತದಲ್ಲಿ ಡೇವ್ ಅವರ ಪತ್ನಿ ಜೆಸ್ನಿ ಅವರು ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಅಟ್ಲಾಂಟಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೃತ್ತಿಯಲ್ಲಿ ನರ್ಸ್ ಆಗಿರುವ ಜೆನ್ನಿ ಅವರ ಸ್ಥಿತಿ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Related Articles

Back to top button