Kannada NewsKarnataka News

ಬೆಳಗಾವಿ: ಬೆಳ್ಳಂಬೆಳಗ್ಗೆ 2 ಅಪಘಾತ ; ಕಾರು ಹಾಯ್ದು ಮಹಿಳೆ ದುರ್ಮರಣ, ಯುವಕನಿಗೆ ತೀವ್ರ ಗಾಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಬೆಳಗಾವಿಯಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ 2 ಅಪಘಾತ ಸಂಭವಿಸಿದ್ದು, ಮಹಿಳೆಯೊರ್ವಳು ಸಾವಿಗೀಡಾಗಿದ್ದಾಳೆ.

ಇನ್ನೊಂದು ಘಟನೆಯಲ್ಲಿ ಯುವಕ ತೀವ್ರ ಗಾಯಗೊಂಡಿದ್ದಾನೆ.

Home add -Advt

ಕಾರು ಹಾಯ್ದು ರಸ್ತೆ ಸ್ವಚ್ಚತಾ ಕಾರ್ಯದಲ್ಲಿ ನಿರತ ಮಹಿಳೆ ಸಾವಿಗೀಡಾಗಿದ್ದಾಳೆ. ಬೆಳಗಾವಿಯ ಬಸವೇಶ್ವರ ವೃತ್ತದ ಬಳಿಯ ಎಲ್ಐಸಿ ಕಚೇರಿ ಆವರಣದಲ್ಲಿ  ಘಟನೆ ನಡೆದಿದೆ.

ಕಸಗುಡಿಸುತ್ತಿದ್ದ ಮಹಿಳೆಯ ಮೇಲೆ ಕಾರು ಹಾಯ್ದುಹೋದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟರು. ಟಿಳಕವಾಡಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಯುವಕನಿಗೆ ಗಾಯ

ಬೆಳಗಾವಿ – ಬಾಗಲಕೋಟೆ ಮುಖ್ಯ ರಸ್ತೆಯ ಬೆಳಗಾವಿ ತಾಲೂಕಿನ ಬಾಳೆಕುಂದ್ರಿ -ಹೊನ್ನಿಹಾಳ ಗ್ರಾಮಗಳ ಮಧ್ಯೆ ಮತ್ತೊಂದು ಅಪಘಾತ ಸಂಭವಿಸಿದೆ.

 ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ 35 ವರ್ಷದ ಮಾವಿನಕಟ್ಟಿ ಗ್ರಾಮದ ಮಹಾಂತೇಶ ಸನದಿ  ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಎರಡು ಕಾಲುಗಳು ನುಜ್ಜಾಗಿದ್ದು,ಮಾರೀಹಾಳ ಠಾಣೆ ಪೋಲೀಸರು ಅಂಬುಲೆನ್ಸ್ ನಲ್ಲಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಿಸಿದ್ದಾರೆ.

ನಿಡಸೋಸಿ ಜಗದ್ಗುರುಗಳ ಯೋಗಕ್ಷೇಮ ವಿಚಾರಿಸಲು ಶ್ರೀಗಳು, ಭಕ್ತರ ದಂಡು

Related Articles

Back to top button