Kannada NewsKarnataka NewsLatest
*ಲಂಚಕ್ಕೆ ಕೈಯೊಡ್ಡಿದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ BEO*

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಅನುಕಂಪದ ನೆಲೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಚಿಕ್ಕಮಗಳೂರಿನ ಬಿಇಒ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ಹೇಮಂತ್ ರಾಜ್ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದವರು. ಅನುಕಂಪದ ಆಧಾರದ ಮೇಲೆ ಮಹಿಳೆಗೆ ಕೆಲಸ ಕೊಡಿಸುವುದಾಗಿ ಹೇಳಿ 10 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದರು. ಲಂಚದ ಹಣ ಪಡೆಯುತ್ತಿದ್ದಗಲೇ ಲೋಕಾಯುಕ್ತ ಅಧಿಕರಿಗಳು ದಾಳಿ ನಡೆಸಿ ಹೇಮಂತ್ ರಾಜ್ ನನ್ನು ಬಂಧಿಸಿದ್ದಾರೆ.
ಮಹಿಳೆ ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಅಧಿಕರಿಗಳು ದಾಳಿ ನಡೆಸಿ ಬಿಇಒ ಹೇಮಂತ್ ರಾಜ್ ನನ್ನು ಬಂಧಿಸಿದ್ದಾರೆ.



