Latest

ಪ್ರಧಾನಿ ಕಚೇರಿಯ ಅಧಿಕಾರಿ ಹೆಸರಲ್ಲಿ ಜಿಲ್ಲಾಧಿಕಾರಿಗೆ ವಂಚನೆ

ಪ್ರಗತಿವಾಹಿನಿ ಸುದ್ದಿ; ಚಾಮರಾಜನಗರ: ಪ್ರಧಾನಮಂತ್ರಿ ಕಚೇರಿಯ ಅಧಿಕಾರಿ ಎಂದು ಹೇಳಿ ಜಿಲ್ಲಾಧಿಕಾರಿಗೆ ಕರೆ ಮಾಡಿ ವ್ಯಕ್ತಿಯೊಬ್ಬ ವಂಚಿಸಲು ಯತ್ನಿಸಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಪ್ರಧಾನಿ ಕಚೇರಿಯ ಅಧಿಕಾರಿ ಎಂದು ರಾವ್ ಎಂಬ ಹೆಸರಿನ ವ್ಯಕ್ತಿ ಚಾಮರಾಜನಗರ ಡಿಸಿ ಚಾರುಲತಾ ಅವರಿಗೆ ಕರೆ ಮಾಡಿ ತನಗೆ ಬಿಳಿಗಿರಿರಂಗನ ಬೆಟ್ಟದಲ್ಲಿ ದೇವರ ದರ್ಶನಕ್ಕೆ, ವಾಸ್ತವ್ಯಕ್ಕೆ, ದೊಡ್ಡ ಸಂಪಿಗೆ ಮರದ ವೀಕ್ಷಣೆಗೆ ಹಾಗೂ ಜಂಗಲ್ ಸಫಾರಿಗೆ ವ್ಯವಸ್ಥೆ ಮಾಡುವಂತೆ ತಿಳಿಸಿದ್ದಾನೆ.

Home add -Advt

ಜಿಲ್ಲಾಧಿಕಾರಿಗಳು ವ್ಯಕ್ತಿಯ ಹೆಸರು ಹಾಗೂ ಹುದ್ದೆ ಬಗ್ಗೆ ಕೇಳಿದಾಗ ಅಪರಿಚಿತ ವ್ಯಕ್ತಿ ರಾವ್ ಎಂದು ಹೇಳಿದ್ದು, ಹೆಸರು ಹಾಗೂ ಹುದ್ದೆ ಬಹಿರಂಗಪಡಿಸದಂತೆ ತಿಳಿಸಿದ್ದಾನೆ. ಅನುಮಾನಗೊಂಡ ಜಿಲ್ಲಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮೈಸೂರು ಮೂಲದ ವ್ಯಕ್ತಿ ಈ ಕೃತ್ಯವೆಸಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಜಿಲ್ಲಾಧಿಕಾರಿ ದೂರು ಹಿನ್ನೆಲೆಯಲ್ಲಿ ಪ್ರಧಾನಿ ಕಚೇರಿ ಹೆಸರು ದುರುಪಯೋಗಪಡಿಸಿಕೊಂಡ ಅಪರಿಚಿತ ವ್ಯಕ್ತಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ

Related Articles

Back to top button