Latest

ಮಹಾರಾಷ್ಟ್ರ ಸಿಎಂ ಏಕನಾಥ ಶಿಂದೆ ಬಳಿ ಆ ಚೂಟಿ ಹುಡುಗಿ ಡಿಮ್ಯಾಂಡ್ ಏನು ಗೊತ್ತಾ?

ಪ್ರಗತಿವಾಹಿನಿ ಸುದ್ದಿ, ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಬಳಿ  ಆ ಚೂಟಿ ಹುಡುಗಿ ಯಾರೂ ಊಹಿಸದ ಬೇಡಿಕೆಯೊಂದನ್ನು ಇರಿಸಿದ್ದಾಳೆ. ಇದಕ್ಕೆ ಶಿಂದೆ ಅವರು ‘Yes’ ಅಂತಲೂ ಹೇಳಿದ್ದಾರೆ.

ಅಂತೆಯೇ ಮಲಬಾರ್ ಹಿಲ್ ನಲ್ಲಿರುವ ಮುಖ್ಯಮಂತ್ರಿಯವರ ‘ನಂದನವನ’ದಲ್ಲಿ ಅವರನ್ನು ಭೇಟಿ ಮಾಡಿದ ಅನ್ನದಾ ದಾಮ್ರೆ ಹೆಸರಿನ 7 ವರ್ಷದ ಆ ಹುಡುಗಿ  ಡಿಮ್ಯಾಂಡ್ ಏನು ಗೊತ್ತಾ? ಆಕೆಗೆ ದೀಪಾವಳಿ ರಜಾ ಅವಧಿಯಲ್ಲಿ  ಗುವಾಹತಿಗೆ ಕರೆದುಕೊಂಡು ಹೋಗಬೇಕೆಂತೆ. ಇದಕ್ಕಾಗಿ ಕನಿಷ್ಠ ಪಕ್ಷ ಪ್ರಾಮಿಸ್ ಕೊಡಿ ಅಂತ ಬಾಲಕಿ ಕೇಳಿದ್ದಾಳೆ.

Home add -Advt

ಅವಳ ಬೇಡಿಕೆಗೆ ಸಮ್ಮತಿಸಿದ ಏಕನಾಥ ಶಿಂದೆ, ತಾವು ಆಸ್ಸಾಂನ ನೀಲಾಚಲ ಹಿಲ್ಸ್ ನಲ್ಲಿರುವ ಪ್ರಸಿದ್ಧ ಕಾಮಾಕ್ಯ ಮಂದಿರಕ್ಕೆ ಹೋಗಲಿದ್ದು ಅಲ್ಲೂ ಅವಳನ್ನು ಕರೆದುಕೊಂಡು ಹೋಗುವುದಾಗಿ ತಿಳಿಸಿದರು.

ಜಾಹೀರಾತು ಏಜೆನ್ಸಿಯೊಂದನ್ನು ನಡೆಸುತ್ತಿರುವ ಸಾಕೇತ್ ದಾಮ್ರೆ ಎಂಬುವವರ ಪುತ್ರಿ ಅನ್ನದಾ ರತ್ನಗಿರಿಯ ಶಾಲೆಯೊಂದರಲ್ಲಿ ಓದುತ್ತಿದ್ದಾಳೆ. ತಂದೆ ಜೊತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಹೋದಾಗಿನ ಅವಳ ಸಂಭಾಷಣೆ ಈಗ ವೈರಲ್ ಆಗಿದೆ.

ಭಾರತೀಯ ಯುವಕ ಕೆನಡಾದಲ್ಲಿ ಗುಂಡೇಟಿಗೆ ಆಹುತಿ

Related Articles

Back to top button