Belagavi NewsBelgaum NewsKannada NewsLatestNational

*ಗೋವಾದ ಬಾಗಾ ಬೀಚ್‌ನಲ್ಲಿ ದುರಂತ ಅಂತ್ಯ ಕಂಡ ಕನ್ನಡಿಗ*

ಪ್ರಗತಿವಾಹಿನಿ ಸುದ್ದಿ: ಗೋವಾದ ಬಾಗಾ ಬೀಚ್‌ನಲ್ಲಿ ಕರ್ನಾಟಕ ಮೂಲದ ಮತ್ತೋರ್ವ ಪ್ರವಾಸಿಗನ ದುರಂತ ಅಂತ್ಯವಾಗಿದೆ. 

ಕರ್ನಾಟಕದ ವಿಜಯಪುರ ಜಿಲ್ಲೆಯ 33 ವರ್ಷದ ವ್ಯಕ್ತಿಯೊಬ್ಬರು ಭೀಕರ ಅಲೆಗಳಿಗೆ ಸಿಲುಕಿ ದುರಂತ ಅಂತ್ಯ ಕಂಡಿದ್ದಾರೆ. ಇದರ ಶಾಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Home add -Advt

ಮೃತರನ್ನು ಸಾಹಸ್ ಅಶ್ವಾಕ್ ಮಸಾಲಿ ಎಂದು ಗುರುತಿಸಲಾಗಿದೆ. ಸಾಹಸ್ ಅವರು ಬಾಗಾ ಬೀಚ್‌ನ ದಡದಲ್ಲಿದ್ದ ಕಲ್ಲುಗಳ ಮೇಲೆ ಕುಳಿತು ಫೋಟೋಗೆ ಪೋಸ್ ನೀಡುತ್ತಾ ಸಮುದ್ರದ ಸೌಂದರ್ಯವನ್ನು ಸವಿಯುತ್ತಿದ್ದರು.

ಈ ಸಮಯದಲ್ಲಿ ಸಮುದ್ರದಲ್ಲಿ ಭಾರಿ ಏರಿಳಿತಗಳಾಗುತ್ತಿದ್ದು ಅಲೆಗಳ ಅಬ್ಬರ ಜೋರಾಗಿತ್ತು. ಅವರು ಕಲ್ಲಿನ ಮೇಲೆ ಕುಳಿತಿದ್ದಾಗಲೇ ದಿಢೀರನೆ ಅಪ್ಪಳಿಸಿದ ಪ್ರಚಂಡ ಅಲೆಯೊಂದು ಅವರನ್ನು ಕ್ಷಣಾರ್ಧದಲ್ಲಿ ಸಮುದ್ರದ ಆಳಕ್ಕೆ ಎಳೆದೊಯ್ದಿದೆ.

ಅವರು ನೀರಿನಲ್ಲಿ ಕೊಚ್ಚಿಹೋಗುತ್ತಿದ್ದಂತೆ ಅಲ್ಲಿದ್ದವರು ತಕ್ಷಣವೇ ಅವರನ್ನು ರಕ್ಷಿಸಲು ಮತ್ತು ಹುಡುಕಲು ಪ್ರಯತ್ನ ನಡೆಸಿದರು. ಆದರೆ ಸಮುದ್ರದ ಸುಳಿ ಹಾಗೂ ನೀರಿನ ತೀವ್ರ ಹರಿವು ಹೆಚ್ಚಾಗಿದ್ದರಿಂದ ಸಾಹಸ್ ಅವರು ನೀರಿನ ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ. 

Related Articles

Back to top button