Kannada NewsKarnataka NewsNational

*ಸಿಸಿಬಿ ಪೊಲೀಸರ ಕಾರ್ಯಾಚರಣೆ: 5 ಕೋಟಿ ರೂ. ಮೌಲ್ಯದ ಡ್ರಗ್ಸ್ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ 5 ಕೋಟಿ ರೂ. ಮೌಲ್ಯದ ಮಾದಕ ವಸ್ತು ಸೀಜ್ ಮಾಡಿದ್ದಾರೆ. ದಾಳಿ ವೇಳೆ ಸುಮಾರು 5 ಕೋಟಿ ರೂ. ಮೌಲ್ಯದ ಮಾದಕ ವಸ್ತು ಪತ್ತೆಯಾಗಿದೆ.

ಸಿಸಿಬಿ ಮಾದಕವಸ್ತು ನಿಗ್ರಹದಳ ಪೆಡ್ಡರ್‌ಗಳ ಮೇಲೆ ದಾಳಿ ಮಾಡಿದೆ. ಈ ಹಿಂದೆ ಈಗಲ್ ಟನ್ ರೆಸಾರ್ಟ್‌ನಲ್ಲಿ ಅರೆಸ್ಟ್ ಆಗಿದ್ದ ಪೆಡ್ಲರ್‌ನಿಂದಲೇ 3.5 ಕೋಟಿ ರೂ. ಮೌಲ್ಯದ ಹೈಡೋ ಗಾಂಜಾ, 1.5 ಕೋಟಿ ರೂ. ಮೌಲ್ಯದ ಸುಮಾರು 1ಕೆಜಿ ಎಂಡಿಎಂಎ ಹಾಗೂ 30 ಲಕ್ಷ ರೂ. ನಗದನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಈ ಸಂಬಂಧ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಡ್ರಗ್ಸ್ ಜಾಲ ಎಲ್ಲೆಡೆ ವ್ಯಾಪಕವಾಗಿ ಹರಡಿದ್ದು ಮತ್ತಷ್ಟು ಜನರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

Home add -Advt

Related Articles

Back to top button