Belagavi NewsBelgaum NewsKannada NewsKarnataka NewsPolitics

*ವಿಶ್ವ ಗುರು ಬಸವೇಶ್ವರ ಹಾಗೂ ಶಿವಾಜಿ ಮಹಾರಾಜರ ಜಯಂತಿ ಸಂಭ್ರಮ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಸರ್ದಾರ್ ಮೈದಾನದಲ್ಲಿ ಜೈ ಭೀಮ್ ಯುವಕ ಮಂಡಳ (ಕಂಗ್ರಾಳಿ ಗಲ್ಲಿ) ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮ್ ವಾದ) ಇವರ ಸಂಯುಕ್ತ ಆಶ್ರಯದಲ್ಲಿ ಜಗದ್ಗುರು ಬಸವೇಶ್ವರ ಮಹಾರಾಜರು ಮತ್ತು ಹಿಂದವಿ ಸ್ವರಾಜ್ಯದ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಗಣ್ಯರ ಸಮ್ಮುಖದಲ್ಲಿ ಮಹಾನ್ ವ್ಯಕ್ತಿತ್ವಗಳ ಪ್ರತಿಮೆಗೆ ಪುಷ್ಪಹಾರ ಅರ್ಪಿಸಿ ಗೌರವ ಸಲ್ಲಿಸಲಾಯಿತು. ಡಾ. ಬಾಬಾಸಾಹೇಬ ಅಂಬೇಡ್ಕರ್ ಜಯಂತಿೋತ್ಸವ ಮಹಾಮಂಡಳದ ಅಧ್ಯಕ್ಷ ಮಲ್ಲೇಶ   ಚೌಗುಲೆ ಅವರು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಪುಷ್ಪಹಾರ ಅರ್ಪಿಸಿದರು. ನಗರಸೇವಕ ಸಿದ್ರಾಯ ಮೆತ್ರಿ ಅವರು ಜಗದ್ಗುರು ಬಸವೇಶ್ವರ ಮಹಾರಾಜರ ಪ್ರತಿಮೆಗೆ ಗೌರವ ಸಲ್ಲಿಸಿದರು.

ಬಾಬು ಸುಳೆಭಾವಿ ಅವರಿಂದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಹಾರ ಅರ್ಪಿಸಲಾಯಿತು, ಹಾಗೆಯೇ ಗಜಾನನ ಸುಳಗೆಕರ್ ಅವರು ಭಗವಾನ್ ಗೌತಮ ಬುದ್ಧರ ಪ್ರತಿಮೆಗೆ ಪುಷ್ಪ ಅರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲೇಶ ಚೌಗುಲೆ ಅವರು ಜಗದ್ಗುರು ಬಸವೇಶ್ವರ, ಛತ್ರಪತಿ ಶಿವಾಜಿ ಮಹಾರಾಜ, ಡಾ. ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಭಗವಾನ್ ಗೌತಮ ಬುದ್ಧರ ವಿಚಾರಗಳನ್ನು ಸಮಾಜದಲ್ಲಿ ಹರಡಿ, ಅವನ್ನು ನೈಜ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ. ಬೆಳಗಾವಿಯಲ್ಲಿ ಡಾ. ಅಂಬೇಡ್ಕರ್ ಜಯಂತಿ ಶಾಂತಿಯುತವಾಗಿ ನೆರವೇರಿದಂತೆ ಬಸವೇಶ್ವರ ಮತ್ತು ಶಿವಜಯಂತಿ ನಿಮಿತ್ತ ನಡೆಯುವ ಮೆರವಣಿಗೆಗಳನ್ನೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸಹಕಾರ ನೀಡಿ ಶಾಂತಿಯುತವಾಗಿ ನಡೆಸುವಂತೆ ನಾಗರಿಕರಿಗೆ ಅವರು ಕರೆ ನೀಡಿದರು.

Home add -Advt

ಈ ಕಾರ್ಯಕ್ರಮದಲ್ಲಿ ಖಡೆಬಜಾರ್ ಪೊಲೀಸ್ ಠಾಣೆಯ ಎಎಸ್‌ಐ ಶ್ರೀಕಾಂತ್ ಜಾಧವ್ ಸೇರಿದಂತೆ ಬಾಬು ಸುಳೆಭಾವಿ, ಆಕಾಶ ಹಲಗೇಕರ, ಭಾವಕಣ್ಣ ಪಿರಗಾನೆ, ಸಂತೋಷ್ ಚೌಗುಲೆ ವಿಶಾಲ್ ಚೌಗುಲೆ, ಸಂತೋಷ್ ಹಳಗೇಕರ್, ಸುನಿಲ್ ಪಿರಗಾನೆ, ದುರ್ಗೇಶ್ ಮಲ್ಲಪ್ಪ ಮೆತ್ರಿ, ಅನ್ವರ್ ದ್ರಾಕ್ಷಿ, ನಿಖಿಲ್ ಮೈತ್ರಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Back to top button