ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶ್ರೀ ಕೃಷ್ಣ ಗಜಾನನ ಯುವಕ ಮಂಡಳ ವತಿಯಿಂದ ಬಡಾಲ ಅಂಕಲಗಿ ಗ್ರಾಮದಲ್ಲಿ ಬುಧವಾರ ಸಂಜೆ ಏರ್ಪಡಿಸಲಾಗಿದ್ದ ಒಂದು ನಿಮಿಷದ ಎತ್ತಿನ ಗಾಡಿ ಓಡಿಸುವ ಭಾರಿ ಜಂಗೀ ಶರ್ಯತ್ತು ಕಾರ್ಯಕ್ರಮವನ್ನು ಲಕ್ಷ್ಮಿ ತಾಯಿ ಕೋ ಆಪರೇಟಿವ್ ಸೊಸೈಟಿ ಚೇರಮನ್ ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿದರು.
ಎತ್ತಿನ ಗಾಡಿಗಳು ಹಳ್ಳಿಗಳ ಸೊಗಡನ್ನು ಎತ್ತಿ ಹಿಡಿದು, ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಇಂದಿನ ಪೀಳಿಗೆಗೆ ಮೊಬೈಲ್, ಇಂಟರ್ನೆಟ್ ಮೊದಲಾದ ಡಿಜಿಟಲ್ ಮಾಧ್ಯಮಗಳ ಆಟದಲ್ಲೇ ಮೈ ಮರೆಯುತ್ತಿದ್ದು, ನಮ್ಮ ಪೂರ್ವಜರು ಬೆಳಿಸಿಕೊಂಡು ಬಂದ ಆಚಾರ ವಿಚಾರಗಳ ಬಗ್ಗೆ ಆಸಕ್ತಿ ಕಡಿಮೆಯಾಗಿದೆ. ಹಿರಿಯರು ನಡೆಸಿಕೊಂಡು ಬಂದ ಪದ್ದತಿಗಳನ್ನು ನಾವು ಮರೆಯದೆ ನೆನಪಿನಲ್ಲಿಟ್ಟುಕೊಳ್ಳುವುದು ಅತ್ಯವಶ್ಯಕ. ನಾವು ಎಲ್ಲಿಗೆ ಹೋದರೂ ನಮ್ಮ ಆಚಾರ, ವಿಚಾರಗಳ ಹಾಗೂ ಸಂಸ್ಕ್ರತಿಯನ್ನು ಮರೆಯಬಾರದು ಎಂದು ಚನ್ನರಾಜ ಹಟ್ಟಿಹೊಳಿ ಈ ಸಂದರ್ಭದಲ್ಲಿ ಹೇಳಿದರು.
ಸದ್ಗುರು ಶ್ರೀ ರಾಚಯ್ಯ ಅಜ್ಜನವರು ದಿವ್ಯ ಸಾನಿಧ್ಯ ವಿಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು, ಶ್ರೀ ಕೃಷ್ಣ ಗಜಾನನ ಯುವಕ ಮಂಡಳದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ