ಪ್ರಗತಿವಾಹಿನಿ ಸುದ್ದಿ; ರಾಯ್ಪುರ್: ಬಜೆಟ್ ಮಂಡನೆಗೆ ಬ್ರೀಫ್ ಕೇಸ್, ಫೈಲ್, ಟ್ಯಾಬ್ ಹಿಡುದು ಬರುವುದು ಸಾಮಾನ್ಯ. ಆದರೆ ಛತ್ತೀಸ್ ಗಢ ಮುಖ್ಯಮಂತ್ರಿ ಭೂಘೇಶ್ ಭಾಗೇಲ್ ಸಗಣಿ ಬ್ಯಾಗ್ ಹಿಡಿದು ಬಂದ ಘಟನೆ ನಡೆದಿದೆ.
ಇಂದು ಛತ್ತೀಸ್ ಗಢ ಸಿಎಂ ಭೂಪೇಶ್ ಬಾಘೇಲ್, ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಬಜೆಟ್ ಮಂಡನೆಗೆ ಆಗಮಿಸಿದ ಸಿಎಂ ಹಸುವಿನ ಸಗಣಿಯಿಂದ ತಯಾರಿಸಲಾದ ಬ್ರೀಫ್ ಕೇಸ್ ಹಿಡಿದು ಆಗಮಿಸಿದ್ದಾರೆ.
ಸಿಎಂ ಭೂಪೇಶ್ ಬಾಘೇಲ್ ರಾಜ್ಯದಲ್ಲಿ ಮೊದಲಿನಿಂದಲೂ ಹಸುವಿನ ಸಗಣಿ ಮಹತ್ವದ ಬಗ್ಗೆ ಹೇಳುತ್ತಿದ್ದರು. ಇದೀಗ ಬಜೆಟ್ ಮಂಡನೆಗೆ ಸಗಣಿ ಬ್ರೀಫ್ ಕೇಸ್ ಹಿಡಿದು ಬಂದಿರುವುದು ದೇಶದ ಗಮನ ಸೆಳೆದಿದೆ.
ರಾಜ್ಯದಲ್ಲಿ ಸಾವಯವ ಕೃಷಿ, ಬಿಡಾದಿ ದನಗಳ ಸಮಸ್ಯೆಗೆ ಪರಿಹಾರ, ಕೃಷಿ ಲಾಭದಾಯಕ ಮಾಡುವಲ್ಲಿ ಹೊಸ ಯೋಜನೆಗಳು, ಗ್ರಾಮೀಣ ಆರ್ಥಿಕತೆ ಅಭಿವೃದ್ಧಿ ಸೇರಿದಂತೆ ಹಲವು ಪ್ರಮುಖ ಅಂಶಗಳನ್ನು ಬಜೆಟ್ ನಲ್ಲಿ ಘೋಷಿಸಿದ್ದಾರೆ.
ರಾಜ್ಯದ ಡೀಮ್ಟ್ ವಿವಿಗಳಲ್ಲಿ ಉಕ್ರೇನ್ ನಿಂದ ಮರಳಿದ ವಿದ್ಯಾರ್ಥಿಗಳಿಗೆ ಪ್ರವೇಶ – ಕೋಡ್ ಯುನಿಕ್ ಅಧ್ಯಕ್ಷ ಡಾ.ಪ್ರಭಾಕರ ಕೋರೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ