
ಪ್ರಗತಿವಾಹಿನಿ ಸುದ್ದಿ, ಯಮಕನಮರಡಿ : ಉತ್ತರ ವಲಯ ಪೊಲೀಸ್ ಮಹಾನಿರೀಕ್ಷಕ ಡಾ. ಚೇತನ್ ಸಿಂಗ್ ರಾಠೋಡ ಭಾನುವಾರ ಸಂಜೆ ಯಮಕನಮರಡಿಗೆ ಭೇಟಿ ನೀಡಿ, ಗಣೇಶ ಪೆಂಡಾಲ್ ಗಳ ಪರಿಶೀಲನೆ ನಡೆಸಿದರು.
ಶಾಂತಿ, ಸುವ್ಯವಸ್ಥೆ ಪರಿಶೀಲನೆ ಹಿನ್ನೆಲೆಯಲ್ಲಿ ರಾಠೋಡ ಭೇಟಿ ನೀಡಿದ್ದು, ಸ್ಥಳೀಯ ಹಿಂದೂ ಹಾಗೂ ಮುಸ್ಲಿಂ ಮುಖಂಡರು ಹಾಗೂ ಸಾರ್ವಜನಿಕರೊಂದಿಗೆ ಸೌಹಾರ್ದಯುತವಾಗಿ ಚರ್ಚಿಸಿದರು.
ಹುಣಶಿಕೊಳ್ಳಮಠದ ಸ್ವಾಮೀಜಿ, ಐಜಿಪಿ ಕಚೇರಿಯ ಡಿಎಸ್ಪಿ ಬಿ.ಎಸ್.ಲೋಕಾಪುರ, ಯಮಕನಮರಡಿ ಇನಸ್ಪೆಕ್ಟರ್ ಜಾವೀದ್ ಮುಶಾಪುರಿ, ಸ್ಥಳೀಯ ಹಿಂದೂ ಮತ್ತು ಮುಸ್ಲಿಂ ಮುಖಂಡರು, ಸಾರ್ವಜನಿಕರು ಇದ್ದರು.