Kannada NewsKarnataka NewsLatest

ಬೆಳಗಾವಿ, ವಿಜಯಪುರಕ್ಕೆ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

ಮುಖ್ಯಮಂತ್ರಿಯಾದ ನಂತರ ಈ ಎರಡೂ ಜಿಲ್ಲೆಗಳಿಗೆ ಬೊಮ್ಮಾಯಿ ಅವರ ಮೊದಲ ಭೇಟಿ ಇದಾಗಲಿದೆ.

Home add -Advt

ವಿಮಾನದ ಮೂಲಕ ಬಳ್ಳಾರಿಗೆ ಆಗಮಿಸಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ 11 ಗಂಟೆಗೆ ಆಲಮಟ್ಟಿಗೆ ಆಗಮಿಸಿ  ಬಾಗಿನ ಅರ್ಪಿಸುವರು.

1 ಗಂಟೆಗೆ ಆಲಮಟ್ಟಿಯಿಂದ ಹೆಲಿಕಾಪ್ಟರ್ ಮೂಲಕ ಬೆಳಗಾವಿ ಸುವರ್ಣ ವಿಧಾನಸೌಧದ ಹೆಲಿಪ್ಯಾಡ್ ಗೆ ಆಗಮಿಸುವರು. ಸುವರ್ಣ ವಿಧಾನಸೌಧದಲ್ಲಿ 2.30ರಿಂದ ಜನಪ್ರತಿನಿಧಿಗಳೊಂದಿಗೆ ಪ್ರವಾಹ ಮತ್ತು ಕೊರೋನಾ ವಿಷಯಕ್ಕೆ ಸಂಬಂಧಿಸಿದಂತೆ ಸಭೆ ನಡೆಸಲಿದ್ದಾರೆ.

ರಾತ್ರಿ 7.20ಕ್ಕೆ ವಿಮಾನದ ಮೂಲಕ ಬೆಂಗಳೂರಿಗೆ ತೆರಳುವರು.

ಗೃಹ ಮಂತ್ರಿ ಅರಗಜ್ಞಾನೇಂದ್ರಗೆ ಪೊಲೀಸರ ಕಾಟ!

 

Related Articles

Back to top button