Belagavi NewsBelgaum News

*ಈ ಮಕ್ಕಳ ಪಾಲಕರು ಪತ್ತೆಯಾದಲ್ಲಿ ಈ ವಿಳಾಸಕ್ಕೆ ಸಂಪರ್ಕಿಸಿ*

ಪ್ರಗತಿವಾಹಿನಿ ಸುದ್ದಿ: ಸಂಗೀತಾ ಎಂಬ ಮಹಿಳೆಯು ಉಸಿರಾಟ ತೊಂದರೆ ಹಾಗೂ ಹೊಟ್ಟೆ ನೋವು ಎಂದು ಚಿಕಿತ್ಸೆಗಾಗಿ ಕುಡಚಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿರುತ್ತಾರೆ. ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ೧೧ ಗಂಟೆಗೆ ಮಹಿಳೆಯು ಮೃತಪಟ್ಟಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದು, ಪಾಲಕರ ಪತ್ತೆಗಾಗಿ ಮನವಿ ಮಾಡಲಾಗಿದೆ.

ಮಹಿಳೆಗೆ ಆಯಾನ (೭) ಸಮೇರ್ (೪) ಹಾಗೂ ಸವೇರ್ (೧ ವರ್ಷ ೫ ತಿಂಗಳು) ಹೆಸರಿನ ಮೂರು ಕುಡಚಿ ಸಮುದಾಯ ಆರೋಗ್ಯ ಕೇಂದ್ರದವರು ಪತ್ರದ ಮೂಲಕ ೦೩ ಮಕ್ಕಳನ್ನು ಅಭಿರಕ್ಷಣೆಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಮಿ ವಿವೇಕಾನಂದ ದತ್ತು ಸ್ವೀಕಾರ ಕೇಂದ್ರಕ್ಕೆ ದಾಖಲು ಮಾಡಿರುತ್ತಾರೆ. ನಂತರ ಸಂಸ್ಥೆಯವರು ೦೩ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಪಡಿಸಿ, ಸದರಿ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ತಾತ್ಕಾಲಿಕವಾಗಿ ರಕ್ಷಣೆ ಮತ್ತು ಪೋಷಣೆಗಾಗಿ ಸ್ವಾಮಿ ವಿವೇಕಾನಂದ ದತ್ತು ಸ್ವೀಕಾರ ಕೇಂದ್ರ ಸುಭಾಷ ನಗರ ಬೆಳಗಾವಿಯಲ್ಲಿ ಅಭೀರಕ್ಷಣೆಗಾಗಿ ಇಡಲಾಗಿದೆ.


ಮಕ್ಕಳ ಜೈವಿಕ ಪಾಲಕರು ಪತ್ತೆಯಾದಲ್ಲಿ ಸುವರ್ಣ ವಿಧಾನಸೌಧದ ಜಿಲ್ಲಾ ಮಕ್ಕಳ ರಕ್ಷಣಾಘಟಕದ ದೂರವಾಣಿ:೦೮೩೧-೨೪೭೪೧೧೧ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಅಣ್ಣಪ್ಪ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button