Latest

ಬಿ.ವೈ ವಿಜಯೇಂದ್ರನೆ ಸಿಎಂ; ಅನುಮಾನವೇ ಇಲ್ಲ; ಅಚ್ಚರಿ ಮೂಡಿಸಿದ ಕೈ ಮಾಜಿ ಶಾಸಕನ ಹೇಳಿಕೆ

ಪ್ರಗತಿವಾಹಿನಿ ಸುದ್ದಿ; ತುಮಕೂರು; ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಸಿಎಂ ಬಿ.ಎಸ್ ಯಡಿಯೂರಪ್ಪ ಪರ ಬ್ಯಾಟ್ ಬೀಸಿದ್ದು, ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು. ಕಾಂಗ್ರೆಸ್ ಕೂಡ ಅವರ ಪರವೇ ಇದೆ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ನಾಮ್ ಕೆ ವಾಸ್ತೆ ಸಿಎಂ, ಎಲ್ಲಾ ನಡೆಸೋದು ವಿಜಯೇಂದ್ರ. ಬಿ.ವೈ ವಿಜಯೇಂದ್ರನೇ ಸರ್ಕಾರ, ಅವರೇ ಚೀಫ್ ಮಿನಿಸ್ಟರ್. ಇದರಲ್ಲಿ ಯಾವುದೇ ಅನುಮಾನವಿಲ್ಲ. ಯಡಿಯೂರಪ್ಪನವರೇ ಸಿಎಂ ಆಗಿದ್ದರೆ ಕಾಂಗ್ರೆಸ್ ಗೂ ಒಳ್ಳೆಯದು. ಇನ್ ಎಫೆಕ್ಟೀವ್ ಸಿಎಂ ಇದ್ದರೆ ವಿಪಕ್ಷಕ್ಕೆ ಒಳ್ಳೆಯದಲ್ಲವೇ ಎಂದಿದ್ದಾರೆ.

Home add -Advt

ಸುಭದ್ರ ಸರ್ಕಾರವಿದ್ದರೆ ರಾಜ್ಯದಲ್ಲಿ ಅಭಿವೃದ್ಧಿಕಾರ್ಯಗಳು ಆಗುತ್ತವೆ. ಆದರೆ ಅಭದ್ರ ಸರ್ಕಾರವಿದ್ದಾಗ ಕೆಲಸ ಕಾರ್ಯಗಳು ನಡೆಯಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತೆ. ಸಿಎಂ ಬದಲಾವಣೆ ಅವರ ಪಕ್ಷದ ವಿಚಾರ ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ಬೇಡ ಆದರೆ ವಯಸ್ಸಾಗಿದೆ ಎಂಬ ಕಾರಣಕ್ಕೆ ಯಡಿಯೂರಪ್ಪ ಬದಲಾವಣೆ ಸರಿಯಲ್ಲ ಎಂದು ಹೇಳಿದರು.

Related Articles

Back to top button