Kannada NewsKarnataka NewsLatest

ಬೆಳಗಾವಿ: ಅಣ್ಣನ ಮದುವೆಗೆ ಬಂದಿದ್ದ ಯೋಧ ಅಪಘಾತದಲ್ಲಿ ಸಾವು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಣ್ಣನ ಮದುವೆಗೆಂದು ಬಂದಿದ್ದ ಭಾರತೀಯ ಸೇನಾಪಡೆ ಯೋಧರೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಬೆಳಗಾವಿ ತಾಲೂಕಿನ ಬೆಳಗುಂದಿ ನಿವಾಸಿ ಓಂಕಾರ ಮಹಾದೇವ ಹಿಂಡಲಗೇಕರ (23) ಮೃತಪಟ್ಟವರು. ಅಣ್ಣನ ಮದುವೆಗೆಂದು ಹತ್ತು ದಿನ ರಜೆ ಪಡೆದು  ಕಳೆದ ಮೂರು ದಿನಗಳ ಹಿಂದೆ ಮನೆಗೆ ಬಂದಿದ್ದರು.

Home add -Advt

ಸೋಮವಾರ ನಡುರಾತ್ರಿ ಕಡೋಲಿಯಲ್ಲಿರುವ ತಮ್ಮ ಸಂಬಂಧಿಗಳ ಮನೆಯಿಂದ ಮರಳುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಕಾರು ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರು.

ಜೀವದ ಹಂಗು ತೊರೆದು ಜನತೆಗಾಗಿ ಶ್ರಮಿಸುವ ಪವರ್ ಮ್ಯಾನ್ ಗಳ ಕಾರ್ಯ ಪ್ರಶಂಸನೀಯ: ಚನ್ನರಾಜ ಹಟ್ಟಿಹೊಳಿ

Related Articles

Back to top button