*ಕಬ್ಬು ಬೆಳೆಗಾರರ ಸಮಸ್ಯೆ: ನಾಳೆ ಸಿಎಂ ನೇತೃತ್ವದಲ್ಲಿ ಸಭೆ: ಸಕ್ಕರೆ ಸಚಿವ ಶಿವಾನಂದ ಪಾಟೀಲ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಬ್ಬು ಬೆಳೆಗಾರರ ಹೋರಾಟಕ್ಕೆ ಕೊನೆಗೂ ಎಚ್ಚೆತ್ತ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು, ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ ಬಳಿಕ ಪ್ರತಿಭಟನಾ ಸ್ಥಳವಾದ ಗುರ್ಲಾಪೂರಕ್ಕೆ ತೆರಳಿದರು.
ಸಿಎಂ ಸಿದ್ದರಾಮಯ್ಯ ನಿರ್ದೇಶನದ ಮೇರೆಗೆ ಹುಬ್ಬಳ್ಳಿಯಿಂದ ಬೆಳಗಾವಿಗೆ ದೌಡಾಯಿಸಿದ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು, ಬೆಳಗಾವಿಯ ಹೊರ ವಲಯದಲ್ಲಿ ಇರುವ ಖಾಸಗಿ ಹೋಟೆಲ್ ನಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹಾಗೂ ಸಕ್ಕರೆ ಆಯುಕ್ತರ ಜೊತೆಗೆ ಸಚಿವ ಪಾಟೀಲ್ ಸಭೆ ನಡೆಸಿದರು.
ನಾಳೆ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆಗೆ ಸಿಎಂ ಸಭೆ
ಬೆಳಗಾವಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಳೆ ರಾಜ್ಯ ಎಲ್ಲಾ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆಗೆ ಸಿಎಂ ಸಭೆ ಕರೆದಿದ್ದಾರೆ. ಅಲ್ಲಿ ನಿರ್ಣಯ ಆಗುತ್ತದೆ. ಅಲ್ಲಿ ನೋಡಿಕೊಂಡು ರೈತರಿಗೆ ಯಾವ ರೀತಿಯ ಸಹಾಯ ಮಾಡಲಾಗುತ್ತದೆ ಎಂದು ನೋಡುತ್ತೇವೆ. ರೈತ ಸಂಘದವರು ಇಲ್ಲಿಯವರೆಗೆ ಪ್ರಾಮಾಣಿಕವಾಗಿ ಹೋರಾಟ ಮಾಡಿದ್ದಾರೆ ಆ ಹೋರಾಟಕ್ಕೆ ಶಕ್ತಿ ತುಂಬುವ ಪ್ರಯತ್ನ ಮಾಡುತ್ತೇವೆ. ನಾನು ರೈತರ ಪ್ರತಿಭಟನಾ ಸ್ಥಳಕ್ಕೆ ಹೋಗುತ್ತೇನೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.
ನಾನು ರೈತರ ಜೊತೆ ಮಾತನಾಡಲು ರೈತರ ಬಳಿ ಹೋರಟಿದ್ದೇನೆ. ಮನವಿ ಮಾಡಲು ಹೋರಟಿದ್ದೇನೆ. ದರ ನಿಗದಿ ಮಾಡೋದು ನಮ್ಮ ಕೈಯಲ್ಲಿ ಇಲ್ಲ, ಕೇಂದ್ರ ಸರ್ಕಾರದ ಕೈಯಲ್ಲಿದೆ. ಎಫ್ ಆರ್ ಪಿ ಕೇಂದ್ರ ಸರ್ಕಾರದ ಕೈಯಲ್ಲಿದೆ. ದೇಶದ ಸಕ್ಕರೆ ಸಚಿವರು ಇದೇ ರಾಜ್ಯದವರಾಗಿದ್ದಾರೆ ಅವರೂ ಕೂಡ ಬಂದಿಲ್ಲ. ಇನ್ನುವರಗೆ ಅವರ ಹೆಸರ ತಗದಿಲ್ಲ. ಸಮಸ್ಯೆಗೆ ಪರಿಹಾರ ಅವರ ಕೈಯಲ್ಲಿ ಇದೆ. ಅವರೇ ಬಗೆ ಹರಿಸಬೇಕು. ಎಫ್ ಆರ್ ಪಿ ನಿಗದಿ ಮಾಡೋದು ಅವರೇ. ದೇಶಕ್ಕೆ ಎಫ್ ಆರ್ ಪಿ ನಿಗದಿ ಮಾಡೋರು ಕೇಂದ್ರ ಸರ್ಕಾರ. ಸಾಧ್ಯವಾದರೆ ಎಲ್ಲ ಸಮಸ್ಯೆ ಬಗೆ ಹರಿಸುತ್ತೇವೆ ಎಂದರು.




