Latest

ಪ್ರಚಾರದ ವೇಳೆ ಮರ ಬಿದ್ದು ಕಾಂಗ್ರೆಸ್ ಅಭ್ಯರ್ಥಿ ಸಾವು

ಪ್ರಗತಿವಾಹಿನಿ ಸುದ್ದಿ, ತಿರುವನಂತಪುರ – ಸ್ಥಳೀಯ ಸಂಸ್ಥೆಯ ಚುನಾವಣೆ ಪ್ರಚಾರದ ವೇಳೆ ಮರ ಬಿದ್ದು ಕಾಂಗ್ರೆಸ್ ಅಭ್ಯರ್ಥಿ ಮೃತಪಟ್ಟಿದ್ದಾರೆ.

ತಿರುವನಂತಪುರ ಜಿಲ್ಲೆಯ ಕರೋಡೆ ಪಂಚಾಯಿತಿಯಲ್ಲಿ ಘಟನೆ ನಡೆದಿದೆ. ಗಿರಿಜಾ ಕುಮಾರಿ (35) ಮೃತ ಅಭ್ಯರ್ಥಿ. ಮಾಜಿ ಪಂಚಾಯಿತಿ ಸದಸ್ಯೆಯಾಗಿದ್ದ ಗಿರಿಜಾ ಕುಮಾರಿ ಪ್ರಸ್ತುತ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಪತಿಯೊಂದಿಗೆ ಪ್ರಚಾರ ಮುಗಿಸಿ ಬೈಕ್ ನಲ್ಲಿ ವಾಪಸಸಾಗುತ್ತಿದ್ದಾಗ ಈ ಘಟನೆ ನಡೆದಿದೆ.

ಮರ ಕತ್ತರಿಸುವಾಗ ಹಗ್ಗದಿಂದ ಕಟ್ಟಿ ಹಿಡಿಯಲಾಗಿತ್ತು. ಆದರೆ ನಿಯಂತ್ರಣ ತಪ್ಪಿ ಗಿರಿಜಾ ಅವರ ಮೇಲೆ ಬಿದ್ದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕುಳಿಯಲಿಲ್ಲ.

Related Articles

Back to top button