Election NewsPolitics

*ಶಿಗ್ಗಾವಿಯಲ್ಲಿ ಕಾಂಗ್ರೆಸ್ ನಿರಾಳ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ನಡೆಯುತ್ತಿರುವ ವಿಧಾನ ಸಭೆಯ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಗ್ರೆಸ್ ಗೆ ಶಿಗ್ಗಾವಿ ಚುನಾವಣೆ ತೆಲೆನೋವಾಗಿ ಪರಿಣಮಿಸಿತು.‌ ಆದರೆ ‌ಇದೀಗ ಬಂಡಾಯ ಶಮನವಾಗಿದೆ. 

ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಸಹ ಈ ಬಾರಿ ಶಿಗ್ಗಾಂವಿ ಉಪಚುನಾವಣೆ ಟಿಕೆಟ್​ ಆಕಾಂಕ್ಷಿಯಾಗಿದ್ದರು. ಆದ್ರೆ, ಕಾಂಗ್ರೆಸ್ ಹೈಕಮಾಂಡ್ ಪಠಾಣ್ ಅವರಿಗೆ ಟಿಕೇಟ್ ನೀಡಿತು. ಇದಿರಿಂದ ಅಸಮಾಧಾನಗೊಂಡಿದ್ದ ಖಾದ್ರೆ, ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು ಬಳಿಕ ಕಾಂಗ್ರೆಸ್ ನಾಯಕರ ಮನವೋಲಿಕೆ ಬಳಿಕ ನಾಮಪತ್ರ ಹಿಂಪಡೆಯುವದಾಗಿ ಘೋಷಣೆ ಮಾಡಿದರು. 

Home add -Advt

ಮತ್ತೊಂದೆಡೆ ಅಪಡವಿಟ್ ಗೆ ಅಗತ್ಯ ಹಾಗೂ ಸಮರ್ಪಕ ವಿವರ ನೀಡದ ಹಿನ್ನಲೆಯಲ್ಲಿ ಪಕ್ಷೇತರ ಅಭ್ಯರ್ಥಿ ಮಂಜುನಾಥ ಕುನ್ನೂರು ನಾಮಪತ್ರವನ್ನು ಚುನಾವಣಾಧಿಕಾರಿ ತಿರಸ್ಕೃತ ಮಾಡಿದ್ದಾರೆ. ಇದರಿಂದ ಕಾಂಗ್ರೆಸ್ ನಾಯಕರು ನಿಟ್ಟುಸಿರು ಬಿಟ್ಟಿದ್ದಾರೆ.

ಮತ್ತೊಂದೆಡೆ ತಮ್ಮ ಪುತ್ರನಿಗೆ ಟಿಕೆಟ್​ ನೀಡುವಂತೆ ಮಂಜುನಾಥ ಕುನ್ನೂರು ಸಹ ಮನವಿ ಮಾಡಿದ್ದರು. ಆದ್ರೆ, ಟಿಕೆಟ್ ಸಿಗದಿದ್ದಕ್ಕೆ ಮಂಜುನಾಥ ಕುನ್ನೂರು ಸಹ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಇದೀಗ ಅವರ ನಾಮಪತ್ರ ರಿಜೆಕ್ಟ್​ ಆಗಿದೆ. 

ಈ ಮೂಲಕ ಕಾಂಗ್ರೆಸ್​ ನಾಯಕರು ನಿ ರಾಳರಾಗಿದ್ದಾರೆ. ಒಂದು ವೇಳೆ ಖಾದ್ರಿ ಸಂಧಾನಕ್ಕೆ ಒಪ್ಪಿರಲಿಲ್ಲ ಅಂದರೆ ಅಲ್ಪಸಂಖ್ಯಾತ ಮತಗಳ ವಿಭಜನೆಯಾಗುತ್ತಿದ್ದವು. ಇನ್ನು ಮಂಜುನಾಥ್ ಸಹ ಕಾಂಗ್ರೆಸ್​ನ ಅಲ್ಪ ಸ್ವಲ್ಪ ಮತಗಳನ್ನು ಪಡೆದುಕೊಂಡು ಮಗ್ಗಲು ಮುಳ್ಳಾಗುತ್ತಿದ್ದರು. ಆದರೆ, ಇದೀಗ  ಶಿಗ್ಗಾಂವಿಯಲ್ಲಿ ಕಾಂಗ್ರೆಸ್​ಗೆ ಅಡ್ಡಿ ಆತಂಖಗಳು ನಿವಾರಣೆಯಾದಂತಾಗಿದೆ.

ಮತ್ತೊಂದೆಡೆ ಕಾಂಗ್ರೆಸ್‌ ಅಭ್ಯರ್ಥಿ ಯಾಸೀರ್‌ ಅಹ್ಮದ್‌ ಖಾನ್‌ ಪಠಾಣ್‌ ವಿವಿಧೆಡೆ ಪಾದಯಾತ್ರೆ ಮೂಲಕ ಮತಯಾಚನೆ ಮಾಡುತ್ತಿದ್ದಾರೆ. 

Related Articles

Back to top button