Kannada NewsKarnataka News
ಮಗು ರಕ್ಷಿಸಲು ಮುಂದುವರಿದ ಕಾರ್ಯಾಚರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಚಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿರುವ ಎರಡು ವರ್ಷದ ಮಗು ಸಾತ್ವಿಕ್ ರಕ್ಷಣಾ ಕಾರ್ಯ ಮುಂದುವರಿದಿದೆ.
ಮಗುವಿನ ತಂದೆ ಸತೀಶ್ ತೋಟದಲ್ಲಿ ಕೊಳವೆ ಬಾವಿ ಕೊರೆಸಿದ್ದರು. ಎರಡು ವರ್ಷದ ಮಗು ಸಾತ್ವಿಕ ಬುಧವಾರ ಸಂಜೆ 5 ಗಂಟೆ ವೇಳೆ ಆಟವಾಡುವ ಸಂದರ್ಭದಲ್ಲಿ ಕಾಲು ಜಾರಿ ಕೊಳವೆ ಬಾವಿಗೆ ಬಿದ್ದಿದ್ದಾನೆ.
ಜೆಸಿಬಿ ಮೂಲಕ ಗುಂಡಿ ತೊಡುವ ಕಾರ್ಯವು ನಡೆಯುತ್ತಿದೆ. ಜೊತೆಗೆ ಮಗುವಿಗೆ ಆಕ್ಸಿಜನ್ ನೀಡಲಾಗಿದೆ. ಮಗುವಿನ ರಕ್ಷಣಾ ಕಾರ್ಯಾಚರಣೆಯಲ್ಲಿ ಕಲ್ಲು ಬಂಡೆ ಅಡ್ಡಿ ಆಗಿದೆ. ಕಲ್ಲನ್ನು ಒಡೆಯಲು ಹಿಟ್ಯಾಚಿ ಮೂಲಕ ಡಿಗ್ಗಿಂಗ್ ಕಾರ್ಯದ ಜೊತೆಗೆ ಬಂಡೆ ಒಡೆಯಲು ಅಗ್ನಿಶಾಮಕ ತಂಡ, ಬ್ರೇಕರ್ ತರಿಸಲಾಗಿದೆ.
ನಿನ್ನೆ ಸಂಜೆ 6 ಗಂಟೆಯಿಂದಲೇ ಕಾರ್ಯಾಚರಣೆ ನಡೆಯುತ್ತಿದೆ. ಇನ್ನೂ ಒಂದು ಗಂಟೆ ಬೇಕಾಗಬಹುದು ಎಂದು ಗೊತ್ತಾಗಿದೆ. ನಿನ್ನೆ ರಾತ್ರಿ ಮಗುವಿನ ಚಲನವಲನ ಕ್ಯಾಮರಾದಲ್ಲಿ ಪತ್ತೆಯಾಗಿದೆ. ಮಗುವಿನ ಸುರಕ್ಷತೆಗಾಗಿ ಎಲ್ಲೆಡೆ ಜನರು ಪ್ರಾರ್ಥಿಸುತ್ತಿದ್ದಾರೆ.


