Belagavi NewsBelgaum NewsKarnataka News

*ಮುಂಗಾರು ಆಲೂಗಡ್ಡೆ ಬೆಳೆಯ ಬಿತ್ತನೆಗೆ ಬೀಜೋಪಚಾರದ ಕ್ರಮಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲ್ಲೂಕಿನಲ್ಲಿ ಸರಿಸುಮಾರು 1200-1500 ಹೇಕ್ಟರ್ ನಷ್ಟು ಪ್ರದೇಶದಲ್ಲಿ ಜೂನ್ 2 ಮತ್ತು 3ನೇ ವಾರದಲ್ಲಿ ಆಲೂಗಡ್ಡೆ ಬೆಳೆಯನ್ನು ನಾಟಿ ಮಾಡುತ್ತಾರೆ. ರೈತರು ಪ್ರಮಾಣಿಕೃತ, ರೋಗಮುಕ್ತ ಬೀಜಗಳನ್ನು ಆಯ್ಕೆ ಮಾಡಿ ಬಿತ್ತನೆ ಮಾಡುವುದು ಅತೀ ಅವಶ್ಯಕವಾಗಿರುತ್ತದೆ.

ಬಿತ್ತನೆಗೆ 15 ದಿವಸ ಮುಂಚಿತವಾಗಿ ಜೈವಿಕ ಗೊಬ್ಬರಗಳಾದ ಟ್ರೈಕೊಡರ್ಮಾ ಹಾರ್ಜಿಯಾನಂ 1 ಕೆ.ಜಿ ಮತ್ತು ಸೂಡೋಮೋನಾಸ್ ಪೂರೋಸೆನ್ಸ್ 1 ಕೆ.ಜಿ. ಅನ್ನು ಪ್ರತಿ ಟನ್ ಕೊಟ್ಟಿಗೆ ಗೊಬ್ಬರಕ್ಕೆ ಮಿಶ್ರಣ ಮಾಡಿ ಭೂಮಿಗೆ ಹಾಕಬೇಕು. ಬೀಜಗಳನ್ನು ಆಯ್ಕೆ ಮಾಡುವ ಸಮಯದಲ್ಲಿ ಕಡ್ಡಾಯವಾಗಿ ಶೀತಲ ಗೃಹದಿಂದ ತೆಗೆದ ನಂತರ 10-15 ದಿವಸಗಳ ಕಾಲ ಮಂದ ಬೆಳಕಿನಲ್ಲಿ ಗಾಳಿಯಾಡುವ ಸ್ಥಳದಲ್ಲಿ ತೆಳ್ಳಗೆ ಹರಡಿ ಹದಗೊಳಿಸಬೇಕು. ಬೀಜಗಳು ಕನಿಷ್ಠ 35-40 ಗ್ರಾಂ ಇದ್ದು, 2-3 ಉದ್ದವಾಗಿ ಉಬ್ಬಿದ ಕಣ್ಣುಗಳನ್ನು ಹೊಂದಿರಬೇಕು. ಪ್ರತಿ ಸಲ ಗಡ್ಡೆಯನ್ನು ಕತ್ತರಿಸುವಾಗ ಕುಡುಗೋಲನ್ನು ಅಲ್ಲೋಹಾಲ್, ಸ್ಪಿರಿಟ್ ಅಥವಾ ಪಾರ್ಮಲಿನ್‌ನಲ್ಲಿ ಅದ್ದ ಬೇಕು. ನಂತರ ಬೀಜದ ಗಡ್ಡೆಗಳನ್ನು ಮ್ಯಾಂಕೋಜೆಬ್ 4 ಗ್ರಾಂ + ಮೆಟಲಾಕ್ಸಿಲ್ 1 ಗ್ರಾಂ + ಸ್ಟೆಷ್ಟೊಮೈಸಿನ್ ಸಲ್ವೆಟ್ 0.5ಗ್ರಾಂ ಪ್ರತಿ ಲೀಟರ್ ದ್ರಾವಣದಲ್ಲಿ 10 ನಿಮಿಷ್ ನೆನೆಸಿ ಬೀಜೋಪಚಾರವನ್ನು ಮಾಡಿ 24 ಘಂಟೆಗಳ ಕಾಲ ನೆರಳಿನಲ್ಲಿ ಒಣಗಿಸಿ ಬಿತ್ತನೆ ಮಾಡಬೇಕು.

Home add -Advt

ತದನಂತರ, ಚೆನ್ನಾಗಿ ಹದಗೊಳಿಸಿದ ಭೂಮಿಯಲ್ಲಿ ಪ್ರತಿ ಹೇಕ್ಟರ್‌ಗೆ 25 ಟನ್ ನಂತೆ ಕೊಟ್ಟಿಗೆ ಗೊಬ್ಬರವನ್ನು ಬೇರೆಸಬೇಕು. 60×20 ಸೆಂ.ಮೀ. ಅಂತರದಲ್ಲಿ ಬಿತ್ತನೆ ಮಾಡಬೇಕು. ಬಿತ್ತಿದ ಸಾಲಿನಿಂದ 3 ಅಂಗಲ ದೂರಿನಲ್ಲಿ 75:75:100 (N.P.K)ನ್ನು ಪ್ರತಿ ಹೇಕ್ಟರ್‌ಗೆ ರಾಸಾಯನಿಕ ಗೊಬ್ಬರವನ್ನು ನೀಡುವುದು ಮತ್ತು ಉಳಿದ 50ರ ಸಾರಜನಕವನ್ನು ಗಿಡಗಳ ಬುಡಕ್ಕೆ 30-35 ದಿನಗಳ ನಂತರ ಮೇಲುಗೊಬ್ಬರವಾಗಿ ಕೊಡುವುದು. ಎಲ್ಲಾ ರೈತ ಬಾಂಧವರು ಸದರಿ ಕ್ರಮವನ್ನು ಅನುಸರಿಸಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿ.ಪಂ), ಬೆಳಗಾವಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button