Kannada NewsKarnataka NewsLatest
*ಹೆತ್ತ ಮಗುವನ್ನೇ ಕೆರೆಗೆ ಎಸೆದು ಕೊಂದ ತಾಯಿ*

ಪ್ರಗತಿವಾಹಿನಿ ಸುದ್ದಿ; ರಾಮನಗರ: ಹೆತ್ತ ತಾಯೊಯೊಬ್ಬಳು ಪುಟ್ಟ ಮಗನನ್ನೇ ಕೆರೆಗೆ ಎಸೆದು ಕೊಂದ ಹೃದಯ ವಿದ್ರಾವಕ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕಾಲಿಕೆರೆ ಗ್ರಾಮದಲ್ಲಿ ನಡೆದಿದೆ.
ಒಂದು ವರ್ಷದ ಮೂರು ತಿಂಗಳ ಕಂದಮ್ಮ ದೇವರಾಜ್ ಮೃತ ಮಗು. 21 ವರ್ಷದ ಭಾಗ್ಯಾ ತನ್ನ ಮಗುವನ್ನೆ ಕೊಂದ ತಾಯಿ.
ಬಟ್ಟೆ ತೊಳೆಯುವ ವಿಚಾರವಾಗಿ ತಾಯಿ ಜೊತೆ ಭಾಗ್ಯ ಜಗಳವಾಡಿದ್ದಳು. ಇದೇ ಕೋಪದಲ್ಲಿ ಭಾಗ್ಯ ಮಗುವನ್ನು ಎತ್ತಿ ಕೆರೆಗೆ ಬಿಸಾಕಿದ್ದಾಳೆ. ಬಳಿಕ ಅಳುತ್ತಾ ಬಂದು ತಾನು ಮಗುವನ್ನು ಕೆರೆಗೆ ಬಿಸಾಕಿದ್ದಾಗಿ ಹೇಳಿದ್ದಾಳೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ಕೆರೆಯಲ್ಲಿ ಮುಳುಗಿದ ಮಗು ಸಾವನ್ನಪ್ಪಿದೆ.
ಆರೋಪಿ ಭಾಗ್ಯಾಳನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.




