
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ಕೊರೋನಾ ದಿನದಿಂದ ದಿನಕ್ಕೆ ಉಲ್ಭಣಿಸುತ್ತಿದೆ. ಶನಿವಾರ ಒಂದೇ ದಿನ 405 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಬೆಳಗಾವಿ ತಾಲೂಕಿನಲ್ಲಿ 222, ಅಥಣಿಯಲ್ಲಿ 43, ಚಿಕ್ಕೋಡಿಯಲ್ಲಿ 42, ಹುಕ್ಕೇರಿಯಲ್ಲಿ 41, ಸವದತ್ತಿಯಲ್ಲಿ 15, ಖಾನಾಪುರದಲ್ಲಿ 13, ಗೋಕಾಕಲ್ಲಿ 12, ಬೈಲಹೊಂಗಲದಲ್ಲಿ 8, ರಾಮದುರ್ಗದಲ್ಲಿ 5, ರಾಯಬಾಗದಲ್ಲಿ 4 ಜನರಿಗೆ ಕೊರೋನಾ ದೃಢಪಟ್ಟಿದೆ.
ಶನಿವಾರ ಬೆಳಗಾವಿಯಲ್ಲಿ ಕೊರೋನಾದಿಂದಾಗಿ ಮೂವರು ಸಾವಿಗೀಡಾಗಿದ್ದಾರೆ. ಇದರಲ್ಲಿ ಓರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರೆ, ಇನ್ನಿಬ್ಬರು ಮನೆಯಲ್ಲೇ ಮೃತರಾಗಿದ್ದಾರೆ. ಆಸ್ಪತ್ರೆಯಲ್ಲಿ ಸಾವಿಗೀಡಾದವರು 71 ವರ್ಷದ ವ್ಯಕ್ತಿಯಾಗಿದ್ದು, ಮನೆಯಲ್ಲಿ ಮೃತಪಟ್ಟವರಲ್ಲಿ ಓರ್ವ 83 ವರ್ಷ ಹಾಗೂ ಇನ್ನೋರ್ವ 30 ವರ್ಷದವರಾಗಿದ್ದಾರೆ.

ಸರ್ವಪಕ್ಷಗಳ ಸಭೆಗೆ ಸಿಎಂ ಬೊಮ್ಮಾಯಿ ನಿರ್ಧಾರ
ಕೋವಿಡ್ ಉಲ್ಬಣದ ನಡುವೆಯೇ ರಾಜ್ಯಕ್ಕೆ ಮತ್ತೆ ವಕ್ಕರಿಸಿತು ಮಾರಣಾಂತಿಕ ಖಾಯಿಲೆ KFD
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ