ರಾಜ್ಯದಲ್ಲಿ ಇಂದು ಕೊರೊನಾಗೆ ಇಬ್ಬರು ಬಲಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಇಂದು 12 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 601ಕ್ಕೆ ಏರಿಕೆಯಾಗಿದೆ.

ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ನಲ್ಲಿ, ಬೀದರ್ 1, ತುಮಕೂರಿನಲ್ಲಿ 2, ಚಿಕ್ಕಬಳ್ಳಾಪುರದಲ್ಲಿ 1, ವಿಜಯಪುರದಲ್ಲಿ 2, ಬೆಳಗಾವಿಯಲ್ಲಿ 1, ಬಾಗಲಕೋಟೆಯ ಜಮಖಂಡಿಯಲ್ಲಿ 1 ಹಾಗೂ ಬೆಂಗಳೂರು ನಗರದಲ್ಲಿ 4 ಪ್ರಕರಣಗಳು ಪತ್ತೆಯಾಗಿರುವುದಾಗಿದೆ.

Home add -Advt

ಬೆಂಗಳೂರಿನಲ್ಲಿ ರೋಗಿ ನಂಬರ್ 557, 63ವರ್ಷದ ವೃದ್ಧ ಹಾಗೂ ಬೀದರಿನಲ್ಲಿ 83 ವರ್ಷದ ವೃದ್ಧ ಕೊರೊನಾಗೆ ಬಲಿಯಾಗಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಕೊರೊನಾ ವೈರಸ್ ನಿಂದ 25 ಮಂದಿ ಸಾವನ್ನಪ್ಪಿದ್ದು, 271 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿತ ಏಳು ಜನರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸೋಂಕಿತರ ವಿವರ:
1. ರೋಗಿ 590- 82 ವರ್ಷದ ವೃದ್ಧ, ಬೀದರ್ ನಿವಾಸಿ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರಿಗೆ ಸೋಂಕು ಬಂದಿದೆ.
2. ರೋಗಿ 591- 40 ವರ್ಷದ ಪುರುಷ, ತುಮಕೂರು ನಿವಾಸಿ, ರೋಗಿ 535, 553ರ ಸಂಪರ್ಕ
3. ರೋಗಿ 592- 29 ವರ್ಷದ ಮಹಿಳೆ, ತುಮಕೂರು ನಿವಾಸಿ, ರೋಗಿ 535, 553ರ ಸಂಪರ್ಕ
4. ರೋಗಿ 593- 54 ವರ್ಷದ ಪುರುಷ, ಚಿಕ್ಕಬಳ್ಳಾಪುರ ನಿವಾಸಿ, ರೋಗಿ 250ರ ದ್ವಿತೀಯ ಸಂಪರ್ಕ
5. ರೋಗಿ 594- 22 ವರ್ಷದ ಯುವಕ, ವಿಜಯಪುರ ನಿವಾಸಿ, ರೋಗಿ 221ರ ಸಂಪರ್ಕ
6. ರೋಗಿ 595- 45 ವರ್ಷದ ಪುರುಷ, ವಿಜಯಪುರ ನಿವಾಸಿ, ರೋಗಿ 221ರ ಸಂಪರ್ಕ
7. ರೋಗಿ 596- 23 ವರ್ಷದ ಯುವಕ, ಬೆಳಗಾವಿ ನಿವಾಸಿ, ರೋಗಿ 128ರ ದ್ವಿತೀಯ ಸಂಪರ್ಕ
8. ರೋಗಿ 597- 45 ವರ್ಷದ ಮಹಿಳೆ, ಬಾಗಲಕೋಟೆಯ ಜಮಖಂಡಿ ನಿವಾಸಿ, ರೋಗಿ 381ರ ಸಂಪರ್ಕ
9. ರೋಗಿ 598- 32 ವರ್ಷದ ಮಹಿಳೆ, ಬೆಂಗಳೂರು ನಿವಾಸಿ, ರೋಗಿ 444ರ ದ್ವಿತೀಯ ಸಂಪರ್ಕ
10. ರೋಗಿ 599: ಬೆಂಗಳೂರಿನ 38 ವರ್ಷದ ಮಹಿಳೆ. ರೋಗಿ ನಂಬರ್ 565ರ ಸಂಪರ್ಕದಲ್ಲಿದ್ದರು.
11. ರೋಗಿ 600: ಬೆಂಗಳೂರಿನ 26 ವರ್ಷದ ಯುವತಿ. ರೋಗಿ ನಂಬರ್ 565ರ ಸಂಪರ್ಕದಲ್ಲಿದ್ದರು.
12. ರೋಗಿ 601: ಬೆಂಗಳೂರಿನ 30 ವರ್ಷದ ಪುರುಷ. ರೋಗಿ ನಂಬರ್ 565ರ ಸಂಪರ್ಕದಲ್ಲಿದ್ದರು.

——————————————

Please open the link and like the Face book page.
ಈ ಲಿಂಕ್ ಓಪನ್ ಮಾಡಿ, ಪೇಜ್ ಲೈಕ್ ಮಾಡಿ.
Thank you

Related Articles

Back to top button