*ಹಳ್ಳಿಗಳು ಪ್ರಗತಿ ಕಂಡರೆ ಮಾತ್ರ ದೇಶದ ಅಭಿವೃದ್ಧಿ: ಸಂಸದೆ ಪ್ರಿಯಂಕಾ ಜಾರಕಿಹೊಳಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಳ್ಳಿಗಳೇ ದೇಶದ ಜೀವಾಳ. ಹೀಗಾಗಿ ಹಳ್ಳಿಗಳು ಪ್ರಗತಿ ಕಂಡರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಿದೆ ಎಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಹೇಳಿದರು.
ಯಮಕನಮರಡಿ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆಯ 10 ಕೋಟಿ ರೂಪಾಯಿ ಅನುದಾನದಲ್ಲಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳು ಅಭಿವೃದ್ಧಿಯಾದರೆ ಅದು ಪ್ರಗತಿಯ ಸಂಕೇತವಾಗಿದ್ದು, ನಾಗರಿಕರ ಸಂಚಾರಕ್ಕೆ ಅಗತ್ಯವಾಗಿದೆ ಎಂದು ತಿಳಿಸಿದರು.
ತಂದೆ, ಸಚಿವರಾದ ಸತೀಶ್ ಜಾರಕಿಹೊಳಿ ಅವರ ದೂರದೃಷ್ಟಿ, ಪ್ರಯತ್ನದಿಂದ ಯಮಕನಮರಡಿ ಕ್ಷೇತ್ರದ ಶೇ.90 % ರಸ್ತೆಗಳು ಅಭಿವೃದ್ಧಿ ಕಂಡಿವೆ. ಇನ್ನುಳಿದ ಶೇ.10 % ರಸ್ತೆಗಳನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದ ಸಂಸದೆ ಪ್ರಿಯಂಕಾ ಜಾರಕಿಹೊಳಿ, ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ನಾನು ಸಂಸದೆಯಾಗಿ ಆಯ್ಕೆಯಾಗಲು ಕಾರಣಿಕರ್ತರಾದ ಸರ್ವರಿಗೂ ಧನ್ಯವಾದ ತಿಳಿಸಿದರು.
ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಗ್ರಾಮೀಣ ಭಾಗದಲ್ಲಿನ ಚರಂಡಿ, ರಸ್ತೆ, ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಜನರ ಸಮಸ್ಯೆ ಅರಿತು ಪರಿಹರಿಸುವ ಪ್ರಯತ್ನ ಮಾಡಬೇಕು ಎಂದು ಕಿವಿಮಾತು ಹೇಳಿದರು. ಇನ್ನು ಕಾಮಗಾರಿ ನಿರ್ವಹಿಸುತ್ತಿರುವ ಎಂಜಿನಿಯರ್, ಗುತ್ತಿಗೆದಾರರು ಗುಣಮಟ್ಟದಿಂದ ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ಇದೇ ವೇಳೆ ಚಿಕ್ಕೋಡಿ ಕ್ಷೇತ್ರದಿಂದ ಜಯಸಾಧಿಸಿ ಸಂಸದೆಯಾಗಿ ಆಯ್ಕೆಯಾದ ಪ್ರಿಯಂಕಾ ಜಾರಕಿಹೊಳಿ ಅವರನ್ನು ಯಮಕನಮರಡಿ ಮತಕ್ಷೇತ್ರದ ಮಾವನೂರ, ಪರಕನಹಟ್ಟಿ, ಕಲಬಾಂವಿ, ಗುಟಗುದ್ದಿ, ಮೂದಗಾ, ಖವಣಿವಾಡಿ, ದೊಂಡಗಟ್ಟಿ ಗ್ರಾಮಸ್ಥರು ಸತ್ಕರಿಸಿದರು. ನಂತರ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಮೊದಗಾ ಗ್ರಾಮದ ಭಾವೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಶಕ್ತಿ ದೇವಿ ಭಾವೇಶ್ವರಿ ದರ್ಶನವನ್ನು ಪಡೆದರು.
ಕಾಮಗಾರಿಗಳ ವಿವರ:
ಮಾವನೂರ ಗ್ರಾಮದಿಂದ ಪರಕನಹಟ್ಟಿ ಗ್ರಾಮ 3.5 ಕಿ.ಮಿ ರಸ್ತೆ, ಕಲಬಾಂವಿ ಗ್ರಾಮದಿಂದ ಗುಟಗುದ್ದಿ ಗ್ರಾಮವರಿಗೆ 2 ಕಿ.ಮಿ ರಸ್ತೆ, ಮೂದಗಾ, ಖವಣಿವಾಡಿ, ದೊಂಡಗಟ್ಟಿ ಗ್ರಾಮದವರಗಿನ 5.50 ಕಿ.ಮಿ ಸೇರಿದಂತೆ ಒಟ್ಟು 10 ಕೋಟಿ ರೂಪಾಯಿ ಡಾಂಬರಿಕರಣ ಕಾಮಗಾರಿಗೆ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸತೀಶ್ ಶುಗರ್ಸ್ ನಿರ್ದೇಶಕ, ಯುವ ನಾಯಕ ರಾಹುಲ್ ಜಾರಕಿಹೊಳಿ, ಜಿಪಂ ಮಾಜಿ ಸದಸ್ಯ ಯಲ್ಲಪ್ಪಾ ಹಂಚಿನಮನಿ, ಮುಖಂಡರಾದ ಮಾರುತಿ ಗುಟಗುದ್ದಿ, ಲಗಮಣ್ಣ ಪನಗುದ್ದಿ, ದಯಾನಂದ ಪಾಟೀಲ್, ಬಸವರಾಜ ಗುತ್ತಿಗೆದಾರ, ಬಸವಣ್ಣಿ ಮುಕನಾಳ, ರಾಮಚಂದ್ರ ನಾಯಕ, ಫಕೀರಪ್ಪ ಹುಂದ್ರಿ, ಬಾರೀಶ್ ಮುಖನವರ್, ಸುರೇಶ ಹರಿಜನ, ಶರತ್ ಪಾಟೀಲ್, ಬಾಬು ಗುರವ್, ಚಂದ್ರಕಾಂತ ಪಾಟೀಲ್, ಜಗ್ಗು ಗುರವ್, ಪಿಂಟು ವಡ್ಡರ್, ಕುಮಾರ ಗುಡಗನಟ್ಟಿ, ಶಿವಪ್ಪಾ ಈರನಟ್ಟಿ, ಅಡಿವೆಪ್ಪಾ ಬಡನಾಯಕ, ಎಸ್. ಎನ್. ಲಟ್ಟೆ, ಶಿವಲಿಂಗ್ ಹೆಬ್ಬಾಳ, ಆಯ್. ಎಂ. ಸವಿನಾಯಕ, ಆನಂದ ಸಂತ್ರೆ, ಸ್ಮೀತಾ ಕೋಕಿತಕರ್, ಗೀತಾ ಬಾಗಡಿ, ಶೋಭಾ ಗುಡಗನಟ್ಟಿ, ಸೇರಿದಂತೆ ಹಲವು ಗ್ರಾಮಗಳ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ