Latest

ಯುವಕರಿಗೆ ಡೆಂಜರಸ್ ಡೆಡ್ಲಿ ಡೆಲ್ಟಾ ಪ್ಲಸ್…!

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ಎರಡನೆ ಅಲೆಗೆ ಕಾರಣವಾಗಿದ್ದ ಡೆಲ್ಟಾ ಮಾದರಿಯ ರೂಪಾಂತರ ವೈರಸ್ ಇದೀಗ ಇನ್ನಷ್ಟು ರೂಪಾಂತರಗೊಂಡಿದ್ದು, ಡೆಲ್ಟಾ ಪ್ಲಸ್ ಮಾದರಿಯಾಗಿ ಬದಲಾವಣೆಗೊಂಡಿದೆ. ಹೊಸ ಹೆಮ್ಮಾರಿ ಯುವಕರನ್ನೇ ಹೆಚ್ಚು ಟಾರ್ಗೆಟ್ ಮಾಡುತ್ತಿದೆ ಎಂಬ ಆತಂಕಕಾರಿ ವಿಷಯ ಹೊರಬಿದ್ದಿದೆ.

ಕರ್ನಾಟಕ ಸೇರಿದಂತೆ ದೇಶದ ನಾಲ್ಕುರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ಮಾದರಿಯ ವೈರಸ್ ಪತ್ತೆಯಾಗಿದ್ದು, ರಾಜ್ಯದಲ್ಲಿ ಇಬ್ಬರು ಇಂತಹ ಸೋಂಕಿನಿಂದ ಬಳಲುತ್ತಿದ್ದಾರೆ. ಈ ನಡುವೆ ಕೊರೊನಾ ಎರಡನೇ ಅಲೆಯಲ್ಲಿ ಸಾವನ್ನಪ್ಪಿದ ಸುಮಾರು 11,000 ಜನರ ಪೈಕಿ ಬಹುತೇಕ ಯುವಕರು ಡೆಲ್ಟಾದಿಂದ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.

ಯುವಕರನ್ನೇ ಟಾರ್ಗೆಟ್ ಮಾಡಿರುವ ಡೆಲ್ಟಾ ವೈರಸ್ ಗೆ 40 ವರ್ಷದೊಳಗಿನ ಜನರೇ ಹೆಚ್ಚು ಬಲಿಯಾಗಿದ್ದಾರೆ. ತಜ್ನರ ಪ್ರಕಾರ ಡೆಲ್ಟಾದಿಂದ ರೂಪಾಂತರಗೊಂಡಿರುವ ಡೆಲ್ಟಾ ಪ್ಲಸ್ ರೂಪಾಂತಿರಿ ವೈರಸ್ ಮೂರನೇ ಅಲೆಗೂ ಕಾರಣವಾಗಬಹುದು. ಒಟ್ಟಾರೆ ಒಂದೆಡೆ ದೇಶದಲ್ಲಿ ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಇನ್ನೊಂದೆಡೆ ಡೆಲ್ಟಾ ತೂಪಾಂತರಿ ಡೆಲ್ಟಾ ಪ್ಲಸ್ ಅಟ್ಟಹಾಸ ಆರಂಭವಾಗಿದ್ದು, ಮೂರನೇ ಅಲೆ ದೇಶದಲ್ಲಿ ಸದ್ದಿಲ್ಲದೇ ಆರಂಭವಾಗಿದೆಯೇ ಎಂಬ ಆತಂಕ ಎದುರಾಗಿದೆ.
ಮಕ್ಕಳಿಗೆ ಚಿತ್ರಹಿಂಸೆ ನೀಡುತ್ತಿದ್ದ ಅಪ್ಪ; ಕ್ರೂರಿ ತಂದೆ ಬಂಧನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button