Latest

ಬಾಲಕಿಯನ್ನು ಗಾಯಗೊಳಿಸಿದ ರೋಹಿತ್ ಶರ್ಮಾ ಪುಲ್ ಮತ್ತು ಹುಕ್  ಹೊಡೆತ

ಪ್ರಗತಿವಾಹಿನಿ ಸುದ್ದಿ, ಲಂಡನ್: ಮಂಗಳವಾರ ಲಂಡನ್‌ನ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ರೋಹಿತ್ ಶರ್ಮಾ ಅದ್ಭುತ ಅರ್ಧಶತಕ ಬಾರಿಸಿದ್ದಾರೆ. ಆದರೆ ಈ ಮಧ್ಯೆ ರೋಹಿತ್ ಶರ್ಮಾ ಅವರ  ಪುಲ್ ಮತ್ತು ಹುಕ್  ಹೊಡೆತಕ್ಕೆ 6 ವರ್ಷದ ಬಾಲಕಿಯೊಬ್ಬಳು ಗಾಯಗೊಂಡಿದ್ದಾಳೆ.

ಶರ್ಮಾ ಬಾರಿಸಿದ ಚೆಂಡು ಟೆರೇಸ್ ಮೇಲೆ ಬಿದ್ದು ಅಲ್ಲಿ ತನ್ನ ಪಾಲಕರೊಂದಿಗೆ ನಿಂತು ಮ್ಯಾಚ್ ವೀಕ್ಷಿಸುತ್ತಿದ್ದ ಮೀರಾ ಸಾಲ್ವಿ ಎಂಬ ಬಾಲಕಿಗೆ ತಗುಲಿತು. ಈ ವೇಳೆ ಸ್ಟ್ಯಾಂಡ್ ನಲ್ಲಿ ಕೆಲ ಕಾಲ ಗಲಿಬಿಲಿ ಉಂಟಾಗಿ ಮ್ಯಾಚ್ ಕೂಡ ಕೆಲ ಕಾಲ ಸ್ಥಗಿತಗೊಂಡಿತು.

Home add -Advt

ಆದರೆ ತಕ್ಷಣ ಕಾರ್ಯಪ್ರವೃತ್ತರಾದ ಇಂಗ್ಲೆಂಡ್ ಫಿಜೊಯೊಗಳು ಕೂಡಲೆ ಧಾವಿಸಿ ಬಾಲಕಿಗೆ ಚಿಕಿತ್ಸೆ ನೀಡಿದ್ದಾರೆ.

ನಂತರದಲ್ಲಿ ರೋಹಿತ್ ಶರ್ಮಾ ಬಾಲಕಿಯನ್ನು ಭೇಟಿಯಾಗಿದ್ದು ಆಕೆಗೆ ಸಾಕಷ್ಟು ಹಣ ಕೂಡ ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಬಾಲಕಿ ಮೀರಾ ಕೂಡ ಚೇತರಿಸಿಕೊಂಡಿದ್ದಾಳೆ.

ಸಿನಿಮೀಯ ಮಾದರಿ ಕೊಲೆ ರಹಸ್ಯ ಬಯಲು: ಮಹಿಳೆ ಸಹಿತ ನಾಲ್ವರ ಬಂಧನ

Related Articles

Back to top button